ಗಾಜಿಯಾಬಾದ್: ತಂಪು ಪಾನೀಯದೊಳಗೆ ಮತ್ತು ಬರುವ ಔಷಧಿ ಬೆರೆಸಿ, ವ್ಯಕ್ತಿಯೋರ್ವ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.
ಪದವಿ ವ್ಯಾಸಂಗ ಮಾಡುತ್ತಿರುವ ಸಂತ್ರಸ್ತೆಯನ್ನು ಫೆಬ್ರವರಿ 7ರಂದು ಹೋಟೆಲ್ ಗೆ ಕರೆಸಿಕೊಂಡಿದ್ದ ಆರೋಪಿ ಆಕೆಯನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ನಡೆಸಿದ್ದಾನೆ, ಜೊತೆಗೆ ಘಟನೆಯನ್ನು ಸಂಪೂರ್ಣವಾಗಿ ಚಿತ್ರೀಕರಿಸಿದ್ದಾನೆ,
ಈ ಸಂಬಂಧ ಪೊಲೀಸರು ಮಹ್ತಾಬ್ ಎಂಬಾತನನ್ನು ಬಂಧಿಸಿದ್ದಾರೆ. ಯುವತಿ ತನ್ನ ಧರ್ಮ ಬದಲಿಸಿಕೊಂಡು ಮದುವೆ ಆಗದಿದ್ದರೇ ಆನ್ ಲೈನ್ ನಲ್ಲಿ ವಿಡಿಯೋ ರಿಲೀಸ್ ಮಾಡುವುದಾಗಿ ಮೆಹ್ತಬ್ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 15 ರಂದು ಮತ್ತೆ ಯುವತಿ ಮೇಲೆ ದಾಳಿ ಮಾಡಿದ ಮೆಹ್ತಬ್ ಆಕೆಯ ಮೊಬೈಲ್ ಕಿತ್ತುಕೊಂಡು ಚಲಿಸುತ್ತಿದ್ದ ಆಟೋದಿಂದ ಕೆಳಗೆ ತಳ್ಳಿ ಹೋಗಿದ್ದ. ಅದಾದ ನಂತರ ಯುವತಿ ಮೆಹ್ತಬ್ ಮತ್ತು ಆತನ ಇಬ್ಬರು ಸಹಚರರ ವಿರುದ್ದ ದೂರು ದಾಖಲಿಸಿದ್ದಳು, ಯುವತಿದೂರಿನ ಆಧಾರದ ಮೇರೆಗೆ ಶನಿವಾರ ಪೊಲೀಸರು ಆತನನ್ನು ಬಂಧಿಸಿದ್ದಾರೆ.