ಕೆನಡಾ ಪ್ರಧಾನಿ ಪತ್ನಿಯೊಂದಿಗೆ ಖಲಿಸ್ತಾನ್ ಉಗ್ರ: ಫೋಟೋ ವೈರಲ್

ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿರುವ ಇಂಟರ್ ನ್ಯಾಷನಲ್ ಯೂತ್ ಫೆಡರೇಷನ್'ನೊಂದಿಗೆ ಕೈಜೋಡಿಸಿರುವ ಖಲಿಸ್ತಾನ ಉಗ್ರ ಜಸ್ವಾಲ್ ಅತ್ವಾಲ್ ಜೊತೆಗೆ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಅವರ ಪತ್ನಿ ಸೋಫಿ ಟ್ರುಡೋ ಅವರಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ...
ಕೆನಡಾ ಪ್ರಧಾನಿ ಪತ್ನಿಯೊಂದಿಗೆ ಖಾಲಿಸ್ತಾನ್ ಉಗ್ರ; ಫೋಟೋ ವೈರಲ್
ಕೆನಡಾ ಪ್ರಧಾನಿ ಪತ್ನಿಯೊಂದಿಗೆ ಖಾಲಿಸ್ತಾನ್ ಉಗ್ರ; ಫೋಟೋ ವೈರಲ್
ನವದೆಹಲಿ: ನಿಷೇಧಿತ ಭಯೋತ್ಪಾದಕ ಸಂಘಟನೆಯಾಗಿರುವ ಇಂಟರ್ ನ್ಯಾಷನಲ್ ಯೂತ್ ಫೆಡರೇಷನ್'ನೊಂದಿಗೆ ಕೈಜೋಡಿಸಿರುವ ಖಲಿಸ್ತಾನ ಉಗ್ರ ಜಸ್ಪಾಲ್ ಅತ್ವಾಲ್ ಜೊತೆಗೆ ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಅವರ ಪತ್ನಿ ಸೋಫಿ ಟ್ರುಡೋ ಅವರಿರುವ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಒಂದು ವಾರಗಳ ಕಾಲ ಭಾರತ ಪ್ರವಾಸ ಕೈಗೊಂಡಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಹಾಗೂ ಮತ್ತವರ ಕುಟುಂಬ ಫೆ.20 ರಂದು ಮುಂಬೈನ ಕಾರ್ಯಕ್ರಮವೊಂದಲ್ಲಿ ಪಾಲ್ಗೊಂಡಿತ್ತು. ಕಾರ್ಯಕ್ರಮದಲ್ಲಿ ಖಲಿಸ್ತಾನ್ ಉಗ್ರ ಜಸ್ಪಾಲ್ ಅತ್ವಾಲ್ ಕೂಡ ಬಂದಿದ್ದಾನೆ.
ಕಾರ್ಯಕ್ರಮದಲ್ಲಿ ಟ್ರುಡೋ ಅವರ ಪತ್ನಿ ಹಾಗೂ ಉಗ್ರ ಫೋಟೋವೊಂದನ್ನು ತೆಗೆಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೆನಡಾದ ಮೂಲಸೌಕರ್ಯ ಸಚಿವ ಅಮರ್ಜಿತ್ ಸೋಹಿ ಎಂಬುವವರೊಂದಿಗೂ ಉಗ್ರನಿರುವ ಫೋಟೋ ಇದ್ದು. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 
ಇದಲ್ಲದೆ ಭಾರತದಲ್ಲಿರುವ ಕೆನಡಾ ರಾಯಭಾರಿ ಕಚೇರಿ, ನವದೆಹಲಿಯಲ್ಲಿಂದು ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಅವರೊಂದಿಗೆ ಭೋಜನ ಕೂಟ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ಕಾರ್ಯಕ್ರಮಕ್ಕೂ ಉಗ್ರನಿಗೆ ಆಹ್ವಾನ ನೀಡಿದ್ದು, ಭೋಜನ ಕೂಟ ಕಾರ್ಯಕ್ರಮಕ್ಕೆ ಉಗ್ರನಿಗೆ ಆಹ್ವಾನ ನೀಡಿರುವ ಈ ಆಹ್ವಾನ ಪತ್ರಿಕೆಯ ಚಿತ್ರಗಳೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿವೆ. 
ಸುದ್ದಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಉಗ್ರನಿಗೆ ನೀಡಲಾಗಿರುವ ಆಹ್ವಾನವನ್ನು ಕೆನಡಾ ಸರ್ಕಾರ ರದ್ದು ಪಡಿಸಿದೆ. 
ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಅವರೊಂದಿಗೆ ನವದೆಹಲಿಯಲ್ಲಿ ನಡೆಸಲಾಗುತ್ತಿರುವ ಭೋಜನ ಕೂಟ ಕಾರ್ಯಕ್ರಮಕ್ಕೆ ಜಸ್ಪಾಲ್ ಅತ್ವಾಲ್'ಗೆ ನೀಡಲಾಗಿದ್ದ ಆಹ್ವಾನವನ್ನು ರದ್ದುಪಡಿಸಲಾಗಿದೆ. ಪ್ರಧಾನಮಂತ್ರಿಗಳ ಭದ್ರತೆ ಕುರಿತಂತೆ ನಾವೇನೂ ಮಾತನಾಡುವುದಿಲ್ಲ ಎಂದು ಭಾರತದಲ್ಲಿರುವ ಕೆನಡಾ ರಾಯಭಾರಿ ಅಧಿಕಾರಿ ಹೇಳಿದ್ದಾರೆ. 
ಜಸ್ಪಾಲ್ ಅತ್ವಾಲ್ ಖಲಿಸ್ತಾನದ ನಿಷೇಧಿತ ಉಗ್ರ ಸಂಘಟನೆಯೊಂದರ ಸದಸ್ಯನಾಗಿದ್ದು, ಭಾರತದ ಮಾಜಿ ಸಚಿವರೊಬ್ಬರ ಕೊಲೆ ಪ್ರಯತ್ನದ ಆರೋಪದಲ್ಲಿ ದೋಷಿಯಾಗಿದ್ದಾನೆ. ಇಂತಹ ಉಗ್ರ ಸಂಘಟನೆಯ ಸದಸ್ಯನೊಂದಿಗೆ ಕೆನಡಾ ಪ್ರಧಾನಿ ಟ್ರುಡೋ ಅವರ ಪತ್ನಿ ಮತ್ತು ಮತ್ತೋರ್ವ ಸಚಿವರು ಫೋಟೋ ತೆಗೆಸಿಕೊಂಡಿರುವುದು ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. 
ಯಾವುದೇ ಕಾರ್ಯಕ್ರಮಕ್ಕೂ ಖಾಲಿಸ್ತಾನ್ ಉಗ್ರನನ್ನು ಆಹ್ವಾನಿಸಿರಲಿಲ್ಲ; ಕೆನಡಾ ಪ್ರಧಾನಿ ಕಚೇರಿ
ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಅವರ ಯಾವುದೇ ಕಾರ್ಯಕ್ರಮಕ್ಕೂ ಖಾಲಿಸ್ತಾನ್ ಉಗ್ರನಿಗೆ ಆಹ್ವಾನ ನೀಡಿರಲಿಲ್ಲ ಎಂದು ಕೆನಡಾ ಪ್ರಧಾನಮಂತ್ರಿ ಕಚೇರಿ ಸ್ಪಷ್ಟನೆ ನೀಡಿದೆ. 

ಖಾಲಿಸ್ತಾನ್ ಉಗ್ರ ಜಸ್ಪಾಲ್ ಅತ್ವಾಲ್ ನನ್ನು ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನ ನೀಡಿರಲಿಲ್ಲ. ಜಸ್ಪಾಲ್ ಗೆ ನೀಡಲಾಗಿದೆ ಎನ್ನಲಾಗಿರುವ ಆಹ್ವಾನವನ್ನೂ ರದ್ದುಪಡಿಸಲಾಗಿದೆ. ಈ ರೀತಿಯ ಅಚಾತುರ್ಯಗಳು ಹೇಗೆ ನಡೆಯಿತು ಎಂಬುದನ್ನು ನಾವೀಗ ಪರಿಶೀಲನೆ ನಡೆಸುತ್ತಿದ್ದಾರೆ. ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿಗಳ ಯಾವುದೇ ಕಾರ್ಯಕ್ರಮಕ್ಕೂ ಉಗ್ರನಿಗೆ ಆಹ್ವಾನ ನೀಡಿಲ್ಲ. ಅಂತರಾಷ್ಟ್ರ ಪ್ರವಾಸದ ಸಂದರ್ಭದಲ್ಲಿ ಕೆಲ ವ್ಯಕ್ತಿಗಳು ತಾವಾಗಿಯೇ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತಾರೆಂದು ಹೇಳಿಕೆಯಲ್ಲಿ ಕೆನಡಾ ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com