ಭೂತಕಾಟ: ಕೊನೆಗೂ ಸರ್ಕಾರಿ ಬಂಗಲೆ ತೊರೆದ ಲಾಲು ಪುತ್ರ ತೇಜ್ ಪ್ರತಾಪ್

ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ಕೊನೆಗೂ ಖಾಲಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ಕೊನೆಗೂ ಖಾಲಿ ಮಾಡಿದ್ದಾರೆ.
ಆದರೆ ತೇಜ್ ಪ್ರತಾಪ್ ನಿವಾಸ ಖಾಲಿ ಮಾಡುವ ವೇಳೆ ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದ್ದು, ಭೂತ-ಪ್ರೇತಗಳ ಕಾರಣದಿಂದಾಗಿ ತಾವು ಸರ್ಕಾರಿ ಬಂಗಲೆಯನ್ನು ತೊರೆಯುತ್ತಿರುವುದಾಗಿ ತೇಜ್ ಪ್ರತಾಪ್  ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ತೇಜ್ ಪ್ರತಾಪ್, "ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತು ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ಅವರು ನಾನು ವಾಸ ಮಾಡುತ್ತಿರುವ ಸರ್ಕಾರಿ ಬಂಗಲೆಯೊಳಗೆ ಭೂತ  ಪ್ರೇತಗಳನ್ನು ಛೂ ಬಿಟ್ಟಿದ್ದಾರೆ. ಹೀಗಾಗಿ ನಾನು ನಿವಾಸವನ್ನು ತೆರವುಗೊಳಿಸಲು ನಿರ್ಧರಿಸಿದ್ದೇನೆ ಎಂದು ಅವರು ಆರೋಪಿಸಿದ್ದಾರೆ. 
ಈ ಹಿಂದೆ ಬಿಹಾರದಲ್ಲಿ ಮಹಾ ಘಟಬಂಧನ್ ಸರ್ಕಾರ ಮುರಿದು ಬಿದ್ದ ಬಳಿಕ ಬಿಜೆಪಿ ಜತೆ ಸೇರಿ ಹೊಸ ಸರ್ಕಾರ ರಚಿಸಿದ್ದ ಜೆಡಿಯು, ಮಾಜಿ ಆರೋಗ್ಯ ಸಚಿವ ತೇಜ್‌ ಪ್ರತಾಪ್‌ ಯಾದವ್‌ ಗೆ 2017ರ ಜುಲೈಯಲ್ಲಿ  ತಮ್ಮ ಅಧಿಕೃತ  ನಿವಾಸವನ್ನು ತೆರವುಗೊಳಿಸುವಂತೆ ಕೇಳಿಕೊಂಡಿತ್ತು. ಆದರೆ ಸರ್ಕಾರದ ಆದೇಶಕ್ಕೆ ಮಾನ್ಯತೆ ನೀಡದ ತೇಜ್ ಪ್ರತಾಪ್ ಅದೇ ಬಂಗಲೆಯಲ್ಲೇ ಉಳಿದುಕೊಂಡಿದ್ದರು. ಇದೀಗ ಬರೊಬ್ಬರಿ 6 ತಿಂಗಳ ಬಳಿಕ ಭೂತ-ಪ್ರೇತಗಳ ಕಾಟ  ನೀಡಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ.  ಬಂಗ್ಲಾ-3 ದೇಶ್ ರತ್ನ ಮಾರ್ಗ್ ನಲ್ಲಿರುವ ಬಂಗಲೆಯನ್ನು ಇದೀಗ ತೇಜ್ ಪ್ರತಾಪ್ ಖಾಲಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com