ಭಾರತೀಯ ಸೇನೆಗೆ ಮತ್ತೆ ರಷ್ಯಾದ 4 ಯುದ್ಧ ನೌಕೆಗಳು ಸೇರ್ಪಡೆ!

ಭಾರತೀಯ ಸೇನೆಗೆ ಮತ್ತೆ 4 ರಷ್ಯಾ ಯುದ್ಧ ನೌಕೆಗಳು ಸೇರ್ಪಡೆಯಾಗಿದ್ದು, ಒಟ್ಟು 200 ಮಿಲಿಯನ್ ಮೊತ್ತದಲ್ಲಿ ಈ ಅತ್ಯಾಧುನಿಕ ಯುದ್ಧನೌಕೆಗಳನ್ನು ಖರೀದಿ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಭಾರತೀಯ ಸೇನೆಗೆ ಮತ್ತೆ 4 ರಷ್ಯಾ ಯುದ್ಧ ನೌಕೆಗಳು ಸೇರ್ಪಡೆಯಾಗಿದ್ದು, ಒಟ್ಟು 200 ಮಿಲಿಯನ್ ಮೊತ್ತದಲ್ಲಿ ಈ ಅತ್ಯಾಧುನಿಕ ಯುದ್ಧನೌಕೆಗಳನ್ನು ಖರೀದಿ ಮಾಡಲಾಗಿದೆ.
ಮೂಲಗಳ ಪ್ರಕಾರ ಮಾಸ್ಕೋ ಮತ್ತು ದೆಹಲಿ ನಡುವಿನ ಈ ಹಿಂದಿನ ಒಪ್ಪಂದ ಅಂತಿಮವಾಗಿದ್ದು, ಒಟ್ಟು 4 ಯುದ್ಧನೌಕಗೆಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಒಟ್ಟು 200 ಮಿಲಿಯನ್ ಮೊತ್ತದ 4 ನೌಕೆಗಳನ್ನು ಖರೀದಿ ಮಾಡಲಾಗುತ್ತಿದೆ. ಪ್ರತೀಯೊಂದು ನೌಕೆಗೂ ಸುಮಾರು 50 ಮಿಲಿಯನ್ ವೆಚ್ಚವಾಗಲಿದ್ದು, ಇಂತಹ 4 ನೌಕೆಗಳನ್ನು ಭಾರತ ಖರೀದಿ ಮಾಡಲು ನಿರ್ಧರಿಸಿದೆ.  ಪ್ರಸ್ತುತ ನೌಕಾದಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ರಿವಾಕ್ 3 ಕ್ಲಾಸ್ ಯುದ್ಧ ನೌಕೆಯಂತಹ ನಾಲ್ಕು ಯುದ್ಧನೌಕೆಗಳನ್ನು ಭಾರತ ಖರೀದಿ ಮಾಡಿದೆ.
ಈ ಪೈಕಿ ರಷ್ಯಾದ ಕಲಿಂಗ್ರಾಡ್ ನಲ್ಲಿರುವ ಯಾಂಟರ್ ಶಿಪ್ ಯಾರ್ಡ್ 2 ಯುದ್ಧನೌಕೆಗಳು ನಿರ್ಮಾಣನವಾಗಲಿದ್ದು, ಮತ್ತೆರಡು ನೌಕೆಗಳು ಗೋವಾದ ಶಿಪ್ ಯಾರ್ಡ್ ಲಿಮಿಟೆಡ್ ನಲ್ಲಿ ನಿರ್ಮಾಣವಾಗಲಿದೆ. ಈ ಯುದ್ಧ ನೌಕೆಯ ಸಂಪೂರ್ಣ ತಂತ್ರಜ್ಞಾನ ರಷ್ಯಾದ ಯಾಂಟಪ್ ಲಿಮಿಟೆಡ್ ನದ್ದಾಗಿದೆ. 
ಭಾರತಕ್ಕೆ ಒಟ್ಟು 24 ಯುದ್ದನೌಕೆಗಳ ಅವಶ್ಯಕತೆ ಇದ್ದು ಈ ಪೈಕಿ 10 ಯುದ್ಧ ನೌಕೆಗಳು ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. 2003ರ ಜೂನ್, ಏಪ್ರಿಲ್ 2014, 2012ರ ಏಪ್ರಿಲ್ ನಲ್ಲಿ ಮೂರು ನೌಕೆ ಮತ್ತು 2013ರ ಜೂನ್ ನಲ್ಲಿ ಒಂದು ನೌಕೆಯನ್ನು ಸೇನೆಗೆ  ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಅಂತೆಯೇ 4 ಮುಂದಿನ 2019ರ ಅಂತ್ಯದೊಳಗೆ ಭಾರತೀಯ ಸೇನೆ ಸೇರ್ಪಡೆಗೊಳ್ಳಲಿದೆ. ಆ ಮೂಲಕ ಭಾರತದ ಯುದ್ಧನೌಕೆಗಳ ಸಾಮರ್ಥ್ಯ 14ಕ್ಕೆ ಏರಿಕೆಯಾಗಲಿದೆ.
ಈ ಬಗ್ಗೆ ಮಾತನಾಡಿರುವ ನೌಕಾಧಿಕಾರಿ ಅಜಯ್ ಶುಕ್ಲಾ ಅವರು, ಭಾರತೀಯ ಸೇನೆಗೆ ಒಟ್ಟು 24 ನೌಕೆಗಳ ಅವಶ್ಯಕತೆ ಇದ್ದು, ಪ್ರಸ್ತುತ ನಮ್ಮ ಬಳಿ 10 ನೌಕೆಗಳು ಮಾತ್ರ ಇವೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com