ನವದೆಹಲಿ: ಮಾಜಿ ವಿಶ್ವ ಸುಂದರಿ ಹಾಗೂ ಬಾಲಿವುಡ್ ನಟಿ ಐಶ್ವರ್ಯ ರೈ ನನ್ನ ತಾಯಿಯಾಗಿದ್ದು, ಐವಿಎಫ್ ಮೂಲಕ ಹುಟ್ಟಿದೆ ಎಂದು ಆಂಧ್ರಪ್ರದೇಶ ಮೂಲದ ಯುವಕನೊಬ್ಬ ಹೇಳಿಕೊಂಡಿದ್ದಾನೆ.
ವಿಖಾಖಪಟ್ಟಣ ಮೂಲದ ಸಂಗೀತ್ ಕುಮಾರ್ ಎಂಬುವವರು ಈ ರೀತಿಯ ಹೇಳಿಕೆಯನ್ನು ನೀಡಿದ್ದು, ಹೇಳಿಕೆ ಇದೀಗ ವಿವಾದವನ್ನು ಹುಟ್ಟುಹಾಕಿದೆ. 1988ರಲ್ಲಿ ನಾನು ಲಂಡನ್ ನಲ್ಲಿ ಐವಿಎಫ್ ಮೂಲಕ ಜನಿಸಿದ್ದೆ. ಐಶ್ವರ್ಯ ಅವರ ಪೋಷಕರಾದ ವೃಂದಾ ಹಾಗೂ ಕೃಷ್ಣ ರೈ ಅವರು ನನ್ನ ಪೋಷಿಸಿದ್ದಾರೆಂದು ಯುವಕ ಹೇಳಿಕೊಂಡಿದ್ದಾನೆ.
ಬಳಿಕ ನನ್ನ ತಂದೆ ನನ್ನನ್ನು ವಿಶಾಖಪಟ್ಟಣಕ್ಕೆ ಕರೆತಂದಿದ್ದರು. ಅಂದಿನಿಂದ ನಾನು ಅವರೊಂದಿಯೇ ಇದ್ದೇನೆಂದು ಸಂಗೀತ್ ಕುಮಾರ್ ಹೇಳಿಕೊಂಡಿದ್ದಾನೆ. ಆದರೆ, ಈ ಬಗ್ಗೆ ಯುವಕ ಯಾವುದೇ ರೀತಿಯ ದಾಖಲೆಗಳನ್ನು ತೋರಿಸಿಲ್ಲ.
ದಾಖಲೆ ಕುರಿತಂತೆ ಹೇಳಿಕೆ ನೀಡಿರುವ ಯುವಕ, ಐಶ್ವರ್ಯ ರೈ ನನ್ನ ತಾಯಿ ಎಂಬುದನ್ನು ಸಾಬೀತು ಪಡಿಸಲು ದಾಖಲೆಗಳು ಪತ್ರಗಳ ನಾಶಕ್ಕೆ ನನ್ನ ಸಂಬಂಧಿಕರೇ ಕಾರಣ ಎಂದು ಆರೋಪಿಸಿದ್ದಾನೆ.