ನಾನು ಒಬ್ಬ ಪತ್ರಕರ್ತ, ಕನ್ನಡ ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಆಗಿದ್ದೆ: ರಜನಿಕಾಂತ್

ದಕ್ಷಿಣ ಭಾರತದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ರಾಜಕೀಯಕ್ಕೆ ಧುಮುಕಿದ್ದರು. ಈ ಕುರಿತು ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದ ಅವರು ತಮ್ಮ ಹಿಂದಿನ...
ರಜನಿಕಾಂತ್
ರಜನಿಕಾಂತ್
Updated on: 
ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ತಲೈವಾ ರಜನಿಕಾಂತ್ ರಾಜಕೀಯಕ್ಕೆ ಧುಮುಕಿದ್ದರು. ಈ ಕುರಿತು ಮಾಧ್ಯಮ ಸಂವಾದದಲ್ಲಿ ಮಾತನಾಡಿದ್ದ ಅವರು ತಮ್ಮ ಹಿಂದಿನ ಕೆಲ ನೆನಪುಗಳನ್ನು ಮೆಲಕು ಹಾಕುತ್ತಾ ನಾನು ಒಬ್ಬ ಪತ್ರಕರ್ತ. ಕನ್ನಡ ಪತ್ರಿಕೆಯೊಂದರಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ. 
ಕರ್ನಾಟಕದಲ್ಲಿದ್ದಾಗ ನಾನು ಕನ್ನಡದ ಪತ್ರಕೆಯೊಂದರಲ್ಲಿ ಕೆಲಸ ಮಾಡಿದ್ದೆ ಎಂದು ಹೇಳಿಕೊಂಡ ರಜನಿಕಾಂತ್, ಸಂಯುಕ್ತ ಕರ್ನಾಟಕದಲ್ಲಿ ಪ್ರೂಫ್ ರೀಡರ್ ಆಗಿ ಸ್ವಲ್ಪ ದಿನ ಕೆಲಸ ಮಾಡಿದ್ದೆ. ನಾನು ಮೊದಲ ಸಂದರ್ಶನ ನೀಡಿದ್ದು ಬೊಮ್ಮಾಯಿ ಪತ್ರಿಕೆಗೆ ಎಂದು ಹೇಳಿದ್ದರು. 
ಇನ್ನು ರಜನಿಕಾಂತ್ ಅವರು ಸಂಯುಕ್ತ ಕರ್ನಾಟಕದಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿರುವ ಕುರಿತ ಮಾಹಿತಿ ಸಂಗ್ರಹದ ವೇಳೆ ಅವರು ಪತ್ರಿಕೆಯಲ್ಲಿ ಉದ್ಯೋಗಿಯಾಗಿರಲಿಲ್ಲ. ಅವರ ಸ್ನೇಹಿತ ರಾಮಚಂದ್ರ ರಾವ್ ಅವರು ಸಂಸ್ಥೆಯಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡುತ್ತಿದ್ದರು. ಸ್ನೇಹಿತನನ್ನು ಭೇಟಿ ಮಾಡಲು ರಜನಿಕಾಂತ್ ನಮ್ಮ ಆಫೀಸ್ ಗೆ ಬರುತ್ತಿದ್ದರು. ರಜನಿಕಾಂತ್ ಅವರಿಗೆ ಪತ್ರಿಕೋಧ್ಯಮದ ಮೇಲೆ ಆಸಕ್ತಿ ಇದ್ದಿದ್ದರಿಂದ ಅವರು ತಮ್ಮ ಸ್ನೇಹಿತನ ಕೆಲಸದಲ್ಲಿ ನೆರವಾಗುತ್ತಿದ್ದರು ಅಷ್ಟೇ. ಇದಕ್ಕೆ ಅವರಿಗೆ ಸಂಸ್ಥೆ ಕಡೆಯಿಂದ ಸಂಬಳ ನೀಡುತ್ತಿರಲ್ಲಿಲ್ಲ ಎಂದು ಸಂಯುಕ್ತ ಕರ್ನಾಟಕ ಆಡಳಿತ ಮಂಡಳಿ ತಿಳಿಸಿದೆ. 
ಖ್ಯಾತ ನಟರೊಬ್ಬರು ನಮ್ಮ ಪತ್ರಿಕೆಯಲ್ಲಿ ಕೆಲಸ ಮಾಡಿರುವುದಾಗಿ ಹೇಳಿಕೊಂಡಿರುವುದು ಸಂತಸದ ಸಂಗತಿ. ಅವರನ್ನು ನಮ್ಮ ಕಚೇರಿಗೆ ಭೇಟಿ ನೀಡುವಂತೆ ಆಹ್ವಾನ ನೀಡುತ್ತೇವೆ ಎಂದು ಆಡಳಿತ ಮಂಡಳಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com