ಡೋಕ್ಲಾಮ್ ನಲ್ಲಿ ಸಿಬ್ಬಂದಿ ಕಡಿತ ಹೇಳಿಕೆ ಬಗ್ಗೆ ಚೀನಾ ಮೌನ!

ಡೋಕ್ಲಾಮ್ ನಲ್ಲಿ ಚೀನಾ ತನ್ನ ಸೇನಾ ಸಿಬ್ಬಂದಿಯ ಸಂಖ್ಯೆಯನ್ನು ಕಡಿಮೆಗೊಳಿಸಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದು ಚೀನಾ ಈ ಬಗ್ಗೆ ಮೌನ ವಹಿಸಿದೆ.
ಚೀನಾ
ಚೀನಾ
ಬೀಜಿಂಗ್: ಡೋಕ್ಲಾಮ್ ನಲ್ಲಿ ಚೀನಾ ತನ್ನ ಸೇನಾ ಸಿಬ್ಬಂದಿಯ ಸಂಖ್ಯೆಯನ್ನು ಕಡಿಮೆಗೊಳಿಸಿದೆ ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದು ಚೀನಾ ಈ ಬಗ್ಗೆ ಮೌನ ವಹಿಸಿದೆ.
ಸೇನಾ ಸಿಬ್ಬಂದಿಯನ್ನು ಕಡಿತಗೊಳಿಸಿರುವುದನ್ನು ಮೌನಾವಾಗಿಯೇ ಚೀನಾ ಒಪ್ಪಿದಂತಿದ್ದು, ಡೊಕ್ಲಾಮ್ ನಲ್ಲಿ ಸೇನಾ ಸಿಬ್ಬಂದಿಯನ್ನು ಯಾವ ಪ್ರಮಾಣದಲ್ಲಿ ನಿಯೋಜಿಸಬೇಕೆಂಬುದು ತನ್ನ ರಾಷ್ಟ್ರದ ನಿರ್ಧಾರ ಹಾಗೂ ಸಾರ್ವಭೌಮತೆಯ ಹಕ್ಕು ಎಂದು ಚೀನಾ ಹೇಳಿದೆ.
ರಾವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆ, ಚೀನಾ ಗಡಿಯಲ್ಲಿರುವ ಡೊಕ್ಲಾಮ್ ಪ್ರದೇಶದಲ್ಲಿ ಸೇನಾ ಸಿಬ್ಬಂದಿಗಳು ಗಸ್ತು ತಿರುಗುವುದು ಸಾರ್ವಭೌಮತ್ವದ ಹಕ್ಕು ಎಂದಷ್ಟೇ ಹೇಳಿ ಚೀನಾ ಸುಮ್ಮನಾಗಿದೆ. ಡೊಕ್ಲಾಮ್ ನಲ್ಲಿ ಚೀನಾ ತನ್ನ ಪಡೆಯನ್ನು ಬೃಹತ್ ಪ್ರಮಾಣದಲ್ಲಿ ಕಡಿಮೆ ಮಾಡಿದೆ ಎಂದು ಜನರಲ್ ರಾವತ್ ಜ.8 ರಂದು ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com