ಮೋದಿ ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆದರಿಕೆ ಒಡ್ಡಿದೆ: ದೆಹಲಿಯಲ್ಲಿ ಜಿಗ್ನೇಶ್ ಮೇವಾನಿ

ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ಸಂಸತ್ ಭವನದ ರಸ್ತೆಯಲ್ಲಿ ಯುವ ಹೂಂಕಾರ್ ರ್ಯಾಲಿ ನಡೆದಿದ್ದು, ಮೋದಿ ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆದರಿಕೆ ಒಡ್ಡಿದೆ ಎಂದು...
ಜಿಗ್ನೇಶ್ ಮೇವಾನಿ
ಜಿಗ್ನೇಶ್ ಮೇವಾನಿ
Updated on: 
ನವದೆಹಲಿ: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ಸಂಸತ್ ಭವನದ ರಸ್ತೆಯಲ್ಲಿ ಯುವ ಹೂಂಕಾರ್ ರ್ಯಾಲಿ ನಡೆದಿದ್ದು, ಮೋದಿ ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನಕ್ಕೆ ಬೆದರಿಕೆ ಒಡ್ಡಿದೆ ಎಂದು ದಲಿತ ನಾಯಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ. ನನ್ನ ಮೇಲೆ ಎಷ್ಟು ದಾಳಿ ಮಾಡಿದರೂ ಸಂವಿಧಾನಕ್ಕೆ ಬದ್ಧನಾಗಿರುತ್ತೇನೆ ಎಂದು ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಆದೇಶವನ್ನು ಉಲ್ಲಂಘನೆ ಮಾಡಿರುವ ಆರೋಪವನ್ನು ತಳ್ಳಿಹಾಕಿರುವ ಜಿಗ್ನೇಶ್ ಮೇವಾನಿ, ಓರ್ವ ಚುನಾಯಿತ ಪ್ರತಿನಿಧಿ ಸಂವಿಧಾನ ಹಾಗೂ ಯುವಕರಿಗೆ ಉದ್ಯೋಗದ ವಿಷಯವನ್ನೂ ಮಾತನಾಡುವಂತಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ನೀವು ನನ್ನ ಮೇಲೆ ಬೇಕಾದಷ್ಟು ದಾಳಿ ಮಾಡಿ ಆದರೆ ನಾನು ಸಂವಿಧಾನಕ್ಕೆ ಬದ್ಧನಾಗಿರುತ್ತೇನೆ ಎಂದು ಮೇವಾನಿ ಹೇಳಿದ್ದಾರೆ. 
ಮಧ್ಯಾಹ್ನ 1 ಗಂಟೆಗೆ ಪ್ರಾರಂಭವಾದ ರ್ಯಾಲಿಯಲ್ಲಿ ಜೆಎನ್ ಯು ವಿದ್ಯಾರ್ಥಿ ನಾಯಕರಾದ ಕನ್ಹಯ್ಯ ಕುಮಾರ್, ಶೀಲಾ ರಶೀದ್, ಉಮರ್ ಖಾಲೀದ್ ವೇದಿಕೆಯ ಮೇಲಿದ್ದರು. ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್ ನ್ಯಾಯವಾದಿಗಳಾದ ಪ್ರಶಾಂತ್ ಭೂಷಣ್ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಳೆದ ವರ್ಷ ಉತ್ತರ ಪ್ರದೇಶದ ಸಹರಣ್ ಪುರದಲ್ಲಿ ನಡೆದಿದ್ದ ದಲಿತ-ಠಾಕೂರ್ ನಡುವಿನ ಗಲಭೆ ಪ್ರಕರಣದಲ್ಲಿ ದಲಿತ ಸಂಘಟನೆ ನಾಯಕ ಚಂದ್ರಶೇಖರ್ ಆಝಾದ್ ನ್ನು ಬಂಧಿಸಲಾಗಿದ್ದು, ಆತನನ್ನು ಬಿಡುಗಡೆ ಮಾಡಬೇಕೆಂದು ರ್ಯಾಲಿಯಲ್ಲಿ ಒತ್ತಾಯಿಸಲಾಯಿತು ಅಷ್ಟೇ ಅಲ್ಲದೇ ಉದ್ಯೋಗ ಸೃಷ್ಟಿ, ಲಿಂಗ ಸಮಾನತೆ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕೆಂದು ಆಗ್ರಹಿಸಲಾಯಿತು. 
ರ್ಯಾಲಿ ನಂತರ ಪ್ರಧಾನಿ ಮೋದಿ ಅವರ ಅಧಿಕೃತ ನಿವಾಸಕ್ಕೆ ತೆರಳಿ, ಸಂವಿಧಾನ ಹಾಗೂ ಮನುಸ್ಮೃತಿಯ ಪುಸ್ತಕಗಳನ್ನು ನೀಡಿ ಪ್ರಧಾನಿ ಮೋದಿ ಅವರಿಗೆ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಕೇಳಲಾಗುತ್ತದೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com