ಮಹದಾಯಿ ನದಿ 'ತಿರುವು' ಖಚಿತಪಡಿಸಿಕೊಳ್ಳಲು ಅಧಿಕಾರಗಳ ತಂಡ ಕಳುಹಿಸಿದ ಗೋವಾ

ಮಹದಾಯಿ ನದಿ ನೀರನ್ನು ಕರ್ನಾಟಕದ ಕಡೆ ತಿರುಗಿಸಲಾಗಿದೆ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಗೋವಾ ಸರ್ಕಾರ...
ಮಹದಾಯಿ ನದಿ
ಮಹದಾಯಿ ನದಿ
ಪಣಜಿ: ಮಹದಾಯಿ ನದಿ ನೀರನ್ನು ಕರ್ನಾಟಕದ ಕಡೆ ತಿರುಗಿಸಲಾಗಿದೆ ಎಂಬ ಮಾಧ್ಯಮಗಳ ವರದಿಯ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ನದಿ ತಿರುವು ಖಚಿತಪಡಿಸಿಕೊಳ್ಳುವುದಕ್ಕಾಗಿ ಅಧಿಕಾರಗಳ ತಂಡವನ್ನು ಕರ್ನಾಟಕ ಗಡಿ ಭಾಗದ ಗ್ರಾಮಗಳಿಗೆ ಕಳುಹಿಸಿದೆ.
ಮಹದಾಯಿ ನದಿ ನೀರು ತಡೆಯುವುದಕ್ಕಾಗಿ ಕರ್ನಾಟಕ ಕಣಕುಂಬಿ ಗ್ರಾಮದಲ್ಲಿ ಡ್ಯಾಮ್ ನಿರ್ಮಿಸುವ ಕೆಲಸ ನಡೆಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸುವುದಕ್ಕಾಗಿ ಅಧಿಕಾರಿಗಳ ತಂಡ ಕಳುಹಿಸಲಾಗಿದೆ ಎಂದು ಗೋವಾ ಜನ ಸಂಪನ್ಮೂಲ ಸಚಿವ ವಿನೋದ್ ಪಾಲೇಕರ್ ಅವರು ವರದಿಗಾರರಿಗೆ ತಿಳಿಸಿದ್ದಾರೆ.
ಕರ್ನಾಟಕ ಮಹದಾಯಿ ನ್ಯಾಯಾಧಿಕರಣದ ತೀರ್ಪನ್ನು ಉಲ್ಲಂಘಿಸಿ ಕಣಕುಂಬಿ ಗ್ರಾಮದಲ್ಲಿ ಕಾಮಗಾರಿ ನಡೆಸುತ್ತಿದೆ ಎಂಬ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ನಾನು ಮುಖ್ಯ ಅಭಿಯಂತರರಿಗೆ ಸೂಚಿಸಿದ್ದೇನೆ ಎಂದು ಪಾಲೇಕರ್ ಅವರು ಪಿಟಿಐಗೆ ತಿಳಿಸಿದ್ದಾರೆ. ಅಲ್ಲದೆ ಇಂದು ಸಂಜೆ ಆ ಕುರಿತು ವರದಿ ನೀಡುವಂತೆ ತಂಡಕ್ಕೆ ಸೂಚಿಸಲಾಗಿದೆ ಎಂದಿದ್ದಾರೆ.
ಮಹದಾಯಿ ನದಿ ಕರ್ನಾಟಕ, ಗೋವಾ ಮತ್ತು ಮಹರಾಷ್ಟ್ರ ಗಡಿಯನ್ನು ಹಂಚಿಕೊಂಡಿದ್ದು, ಗೋವಾ ಮತ್ತು ಕರ್ನಾಟಕ ನಡುವೆ ನೀರಿನ ಸಮಾನ ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹದಾಯಿ ನ್ಯಾಯಾಧಿಕರಣ ಸ್ಥಾಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com