ಪ್ರಧಾನಿ ಮೋದಿ- ಇಸ್ರೇಲ್ ಪ್ರಧಾನಿ ನೇತಾನ್ಯಹು 'ಆಲಿಂಗನ ರಾಜತಾಂತ್ರಿಕತೆ' ಕುರಿತು ಕಾಂಗ್ರೆಸ್ ವ್ಯಂಗ್ಯ

6 ದಿನಗಳ ಭಾರತ ಭೇಟಿಗಾಗಿ ದೆಹಲಿಗೆ ಆಗಮಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡ ಪ್ರಧಾನಿ ಅಪ್ಪುಗೆಯ ಮೂಲಕ ಸ್ವಾಗತ ಕೋರಿದ್ದನ್ನು ಕಾಂಗ್ರೆಸ್ ಅಪಹಾಸ್ಯ ಮಾಡಿದೆ.
ಪ್ರಧಾನಿ ಮೋದಿ ಮತ್ತು ನೇತಾನ್ಯಹು ಭೇಟಿ
ಪ್ರಧಾನಿ ಮೋದಿ ಮತ್ತು ನೇತಾನ್ಯಹು ಭೇಟಿ
ನವದೆಹಲಿ: 6 ದಿನಗಳ ಭಾರತ ಭೇಟಿಗಾಗಿ ದೆಹಲಿಗೆ ಆಗಮಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತಾನ್ಯಹು ಅವರನ್ನು ಆತ್ಮೀಯವಾಗಿ ಬರ ಮಾಡಿಕೊಂಡ ಪ್ರಧಾನಿ ಅಪ್ಪುಗೆಯ ಮೂಲಕ ಸ್ವಾಗತ ಕೋರಿದ್ದನ್ನು ಕಾಂಗ್ರೆಸ್  ಅಪಹಾಸ್ಯ ಮಾಡಿದೆ.
ಈ ಬಗ್ಗೆ ಕಾಂಗ್ರೆಸ್ ಪಕ್ಷದ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಅಪ್ಲೋಡ್ ಮಾಡಲಾಗಿದ್ದು, ಪ್ರಧಾನಿ ಮೋದಿ ಜಗತ್ತಿನ ವಿವಿಧ ನಾಯಕರನ್ನು ಆಲಂಗಿಸಿದ ಚಿತ್ರಗಳು ಹಾಗೂ ದೃಶ್ಯಗಳನ್ನು ಉಪಯೋಗಿಸಿ ಒಂದು ಸ್ವಾರಸ್ಯಕರ  ವೀಡಿಯೋ ತಯಾರಿಸಿ ಪ್ರತಿಯೊಂದು ಚಿತ್ರಣಕ್ಕೆ ಸ್ವಾರಸ್ಯಕರ ಶೀರ್ಷಿಕೆಗಳನ್ನು ನೀಡಲಾಗಿದೆ. ವಿಡಿಯೋದಲ್ಲಿ ಫ್ರಾನ್ಸ್ ಮಾಜಿ ಅಧ್ಯಕ್ಷ ಫ್ರಾಕೋಯಿಸ್ ಹೊಲಾಂಡೆ ಅವರಿಗೆ ನೀಡಿದ ‘ಟೈಟಾನಿಕ್ ಹಗ್’ ಎನ್ನಲಾಗಿದ್ದರೆ ಮೆಕ್ಸಿಕೋದ  ಅಧ್ಯಕ್ಷ ಎನ್ರಿಖ್ ಪೆನಾ ನೀಟೋಗೆ ನೀಡಿದ ಆಲಿಂಗನವನ್ನು ‘ಲೆಟ್ ಮಿ ಲವ್ ಯು ಹಗ್’ ಎಂದು ಬಣ್ಣಿಸಲಾಗಿದೆ. ಅಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡಿದ ಅಪ್ಪುಗೆಯನ್ನು ‘ದಟ್ಸ್ ಇನಫ್ ಹಗ್ಸ್’ ಎಂದು ವ್ಯಂಗ್ಯ  ಮಾಡಲಾಗಿದೆ.
ಇದಲ್ಲದೆ ಜರ್ಮನ್ ಚಾನ್ಸಿಲರ್ ಏಂಜೆಲಾ ಮಾರ್ಕೆಲ್ ಅವರೊಂದಿಗಿನ ಮಿಸ್ಡ್ ಹ್ಯಾಂಡ್ ಶೇಕ್ ಹಾಗೂ ಜಪಾನ್ ದೇಶದ ಫಸ್ಟ್ ಲೇಡಿ ಅಕೀ ಅಬೆ ಅವರಿಗೆ ಸೌಜನ್ಯ ತೋರಿಸುವಾಗ ಎಡವಿದ ಮೋದಿಯ ಚಿತ್ರಣಗಳನ್ನೂ  ವೀಡಿಯೋದಲ್ಲಿ ನೀಡಲಾಗಿದೆ. ಅಂತಿಮವಾಗಿ "ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತಾನ್ಯಹು ಭಾರತ ಭೇಟಿಯಲ್ಲಿರುವುದರಿಂದ ಪ್ರಧಾನಿ ಮೋದಿಯಿಂದ ಇನ್ನಷ್ಟು ಹಗ್ ಗಳನ್ನು ನಿರೀಕ್ಷಿಸುತ್ತೇವೆ" ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಸಂಬಂಧದ ಕುರಿತಂತೆ ಮೋದಿ ಅಪ್ಪುಗೆಯನ್ನು "ವಿಫಲ ಹಗ್‌ಪ್ಲೊಮೆಸಿ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈ ಹಿಂದೆ ಬಣ್ಣಿಸಿದ್ದರು. ಕಳೆದ ವರ್ಷ ಟ್ರಂಪ್ ಅವರು ತಮ್ಮ ದೇಶ  ಪಾಕಿಸ್ತಾನದ ಜತೆಗೆ ಸಂಬಂಧ ಸುಧಾರಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದೇ ತಡ ರಾಹುಲ್ ಟ್ವೀಟ್ ಮಾಡಿ ‘ಮೋದಿಜಿ ಬೇಗ, ಅಧ್ಯಕ್ಷ ಟ್ರಂಪ್ ಅವರಿಗೆ ಇನ್ನೊಂದು ಹಗ್ ಬೇಕೆಂದೆನಿಸುತ್ತಿದೆ" ಎಂದು ಟ್ವೀಟ್ ಮಾಡಿದ್ದರು.
ಕಾಂಗ್ರೆಸ್ ಪಕ್ಷದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com