26/11 ಮುಂಬೈ ದಾಳಿ: 9 ವರ್ಷದ ಬಳಿಕ ಭಾರತಕ್ಕೆ ಆಗಮಿಸಿದ ಬಾಲಕ 'ಮೋಶೆ'

2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ತನ್ನ ಪೋಷಕರನ್ನು ಕಳೆದುಕೊಂಡಿದ್ದ ಮೋಶೆ ಹಾಲ್ಟ್ಜ್'ಬರ್ಗ್ 9 ವರ್ಷದ ಬಳಿಕ ಮೊದಲ ಬಾರಿಗೆ ಮುಂಬೈಗೆ ಆಗಮಿಸಿದ್ದಾರೆ...
ಮೋಶೆ ಹಾಲ್ಟ್ಜ್'ಬರ್ಗ್
ಮೋಶೆ ಹಾಲ್ಟ್ಜ್'ಬರ್ಗ್
ಮುಂಬೈ: 2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ತನ್ನ ಪೋಷಕರನ್ನು ಕಳೆದುಕೊಂಡಿದ್ದ ಮೋಶೆ ಹಾಲ್ಟ್ಜ್'ಬರ್ಗ್ 9 ವರ್ಷದ ಬಳಿಕ ಮೊದಲ ಬಾರಿಗೆ ಮುಂಬೈಗೆ ಆಗಮಿಸಿದ್ದಾರೆ. 
ಮುಂಬೈನಲ್ಲಿರುವ ನಾರಿಮನ್ ಹೌಸ್'ಗೆ ಆಗಮಿಸಿರುವ ಮೋಶೆ, ಭಾರತದ ಪ್ರವಾಸದಲ್ಲಿರುವ ಇಸ್ರೇಲ್ ರಾಷ್ಟ್ರ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮುಂಬೈ ದಾಳಿಯಲ್ಲಿ ಬಲಿಯಾದವರಿಗಾಗಿ ನಿರ್ಮಿಸಲಾಗುತ್ತಿರುವ ಸ್ಮಾರಕವನ್ನು ಜ.18ರಂದು ಉದ್ಘಾಟನೆ ಮಾಡಲಿದ್ದಾರೆ. 
2008ರ 26/11 ರಂದು ಮುಂಬೈ ಮೇಲೆ ಉಗ್ರರು ಭೀಕರ ದಾಳಿ ನಡೆಸಿದ್ದರು, ದಾಳಿಯಲ್ಲಿ 164 ಜನರು ಸಾವನ್ನಪ್ಪಿ, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 
ದಾಳಿಯಲ್ಲಿ ಮೋಶೆ ಅವರ ತಂದೆ ಹಾಗೂ ತಾಯಿ ಇಬ್ಬರು ಉಗ್ರರ ಗುಂಡೇಟಿಗೆ ಬಲಿಯಾಗಿದ್ದರು. ಉಗ್ರರು ದಾಳಿ ನಡೆಸಿದ್ದಾಗ ಮೋಶೆ 2 ವರ್ಷದ ಮಗುವಾಗಿದ್ದ. ಏನೂ ಅರಿಯದ ವಯಸ್ಸಿನಲ್ಲಿ ತನ್ನ ತಂದೆ ಹಾಗೂ ತಾಯಿಯನ್ನು ಮೋಶೆ ಕಳೆದುಕೊಂಡಿದ್ದ. 
ದಾಳಿ ಬಳಿಕ ಅನಾಥನಾಗಿದ್ದ ಮೋಶೆಯನ್ನು ಇಸ್ರೇಲಿನ ಅಫುಲಾ ನಗರದಲ್ಲಿದ್ದ ಅವರ ಅಜ್ಜ ಹಾಗೂ ಅಜ್ಜಿ ಅಲ್ಲಿಗೇ ಕರೆದುಕೊಂಡು ಪೋಷಣೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com