ಪ್ರಸಕ್ತ ವರ್ಷದಿಂದ ಹಜ್ ಯಾತ್ರಿಕರ ಸಬ್ಸಿಡಿ ರದ್ದು: ಮುಕ್ತಾರ್ ಅಬ್ಬಾಸ್ ನಖ್ವಿ

ಹಜ್ ಯಾತ್ರಿಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಪ್ರಸಕ್ತ ವರ್ಷದಿಂದ ನಿಲ್ಲಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಮುಕ್ತಾರ್...
ಹಜ್
ಹಜ್
Updated on
ನವದೆಹಲಿ: ಹಜ್ ಯಾತ್ರಿಕರಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಪ್ರಸಕ್ತ ವರ್ಷದಿಂದ ನಿಲ್ಲಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. 
ಕೇಂದ್ರ ಸರ್ಕಾರ ಪ್ರತಿವರ್ಷ ಹಜ್ ಯಾತ್ರೆ ಸಬ್ಸಿಡಿಗೆ ಸುಮಾರು 750 ಕೋಟಿ ರುಪಾಯಿ ವೆಚ್ಚ ಮಾಡುತ್ತಿತ್ತು. ಈ ಸಬ್ಸಿಡಿಯ ಉಪಯೋಗ ಮುಸ್ಲಿಂರಿಗೆ ಆಗುತ್ತಿರಲಿಲ್ಲ. ಬದಲಾಗಿ ಏಜೆನ್ಸಿಗಳಿಗೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಬ್ಸಿಡಿಯನ್ನು ಪ್ರಸಕ್ತ ವರ್ಷದಿಂದ ನಿಲ್ಲಿಸಲಾಗಿದೆ ಎಂದು ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. 
ಪ್ರಸಕ್ತ ವರ್ಷದಲ್ಲಿ ಭಾರತದಿಂದ ಸುಮಾರು 1 ಲಕ್ಷ 75 ಸಾವಿರ ಜನರು ಹಜ್ ಯಾತ್ರೆ ಕೈಗೊಳ್ಳುತ್ತಿದ್ದು ಇವರೆಲ್ಲರೂ ಸಬ್ಸಿಡಿ ಇಲ್ಲದೆ ಹಜ್ ಗೆ ತೆರಳಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com