ಇದನ್ನು ಪ್ರಶ್ನಿಸಿದ ಕ್ರಿಕೆಟಿಗ ಗಂಭೀರ್ ಹಿರಿಯ ವಕೀಲ ರಾಜೀವ್ ನಾಯರ್ ಮುಖೇನ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಅವರು ಗೌತಮ್ ಗಂಭೀರ್ ಎಂದರೆ ತಕ್ಷಣ ಬರುವುದು ಕ್ರಿಕೆಟಿಗ ಗಂಭೀರ್ ಹೆಸರು ಮಾತ್ರವೇ, ಇನ್ನಾರದೂ ಅಲ್ಲ. ಹೀಗಾಗಿ ಬಾರ್, ಪಬ್ ಗಳಿಗೆ ಅವರ ಹೆಸರಿನ ಟ್ಯಾಗ್ ಲೈನ್ ಬಳಸುವುದಕ್ಕೆ ತಡೆ ನೀಡಬೇಕೆಂದು ಕೋರಿದ್ದರು.