ಸುದ್ದಿಸಂಸ್ಥೆಯ ಪ್ರಕಾರ 23 ವರ್ಷದ ಸೆಪೋಯ್ ಮನ್ ದೀಪ್ ಸಿಂಗ್ ಅವರು ಪಾಕಿಸ್ತಾನಿ ರೇಂಜರ್ಸ್ ಗಳ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಪ್ರಮುಖವಾಗಿ ಪಾಕಿಸ್ತಾನಿ ರೇಂಜರ್ಸ್ ಗಳು ಭಾರತೀಯ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಸತತ ಗುಂಡಿನ ದಾಳಿ ನಡೆಸುತ್ತಿದ್ದು, ಚಿನಾಬ್ ನದಿ ದಡದಲ್ಲಿರುವ ಗ್ರಾಮ ಮತ್ತು ಐಬಿ ಮೇಲೆ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಪರಿಣಾಮ ಸುತ್ತಮುತ್ತಲಿನ ಹಲವು ಗ್ರಾಮಗಳು ಗುಂಡಿನ ದಾಳಿಗೆ ತುತ್ತಾಗಿದ್ದು, ಈ ವರೆಗೂ ಭಾರತೀಯ ಸೇನೆ ಸುಮಾರು 8 ಸಾವಿರದಿಂದ 9 ಸಾವಿರ ಗ್ರಾಮಸ್ಥರನ್ನು ಸ್ಥಳಾಂತರ ಮಾಡಿದೆ ಎಂದು ತಿಳಿದುಬಂದಿದೆ. ಈ ಪೈಕಿ ಆರ್ ಎಸ್ ಪುರ ಸೆಕ್ಟರ್ ನಲ್ಲಿರುವ ಸೇನಾ ಕ್ಯಾಂಪ್ ನಲ್ಲಿ ಸುಮಾರು 1 ಸಾವಿರ ಮಂದಿಗೆ ಆಶ್ರಯ ಕಲ್ಪಿಸಲಾಗಿದ್ದು, ಉಳಿದವರಿಗೆ ಇತರೆ ಪ್ರದೇಶಗಳಲ್ಲಿ ಕ್ಯಾಂಪ್ ನಿರ್ಮಿಸಲಾಗಿದೆ.