

ನವದೆಹಲಿ: ಇನ್ನೂ 100 ದಿನಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ರಾಜಕೀಯೋದ್ಯಮಿ ರಾಜೇಶ್ ಜೈನ್ ತಿಳಿಸಿದ್ದಾರೆ.
2014ರ ಲೋಕಸಭಾ ವೇಳೆ ಪ್ರಧಾನಿ ನರೇಂದ್ರಮೋದಿ ಅವರ ಪ್ರಚಾರಂದೋಲನಾದಲ್ಲಿ ಪ್ರಮುಖ ಪಾತ್ರ ವಹಿಸಿದ ರಾಜೇಖ್ ಜೈನ್ , ತಮ್ಮ ನಯಿದಿಶಾ .ಕಾಮ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ.
2019 ಮೇ- ಏಪ್ರಿಲ್ ತಿಂಗಳಲ್ಲಿ ಚುನಾವಣೆ ನಿಗದಿಯಾಗಿತ್ತು, ಆದರೆ, ಅದಕ್ಕೂ ಮುಂಚಿತವಾಗಿ ಇನ್ನೂ 100 ದಿನಗಳಲ್ಲಿಯೇ ಚುನಾವಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಹೇಳಿಕೆಗೆ ಆರು ಕಾರಣಗಳನ್ನು ನೀಡಿದ್ದಾರೆ. ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಉತ್ತಮ ಸಾಧನೆಗೈದಿರುವುದು, ಬಜೆಟ್ ನಲ್ಲಿ ಕೃಷಿಕರು ಹಾಗೂ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವುದು, ಅಭಿವೃದ್ಧಿಗಾಗಿ ಮಿತ ಪ್ರಮಾಣದ ನಿದಿ ಮೀಸಲು ಮತ್ತು ಉತ್ತಮ ಯೋಜನೆ ಪ್ರಕಟಿಸುವುದು, ಅನಿರೀಕ್ಷಿತ ಮಳೆಯಿಂದ ಹಾನಿಯಾದ ಬೆಳೆಗಳಿಗೆ ವಿಮಾ ಸೌಲ್ಯ ಕಲ್ಪಿಸಿರುವುದು, ಮುಂಬರುವ ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನ, ಮಹಾರಾಷ್ಟ್ರ ತಮಿಳುನಾಡು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಸ್ವಚ್ಛ ಭಾರತ ಮಾಡಲಾಗುತ್ತದೆ.
ಈ ಎಲ್ಲಾ ಕಾರಣಗಳಿಂದ ಇನ್ನೂ 100 ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ ಎಂದು ರಾಜೇಶ್ ಜೈನ್ ತಿಳಿಸಿದ್ದಾರೆ.