ಪಾಕಿಸ್ತಾನದಿಂದ ಭಾರತ ಯೋಧರ ಹತ್ಯೆ, ಪ್ರಬಲ ಪ್ರತಿಭಟನೆ ದಾಖಲಿಸಿದ ಬಿಎಸ್ ಎಫ್

ಇಬ್ಬರು ಭಾರತೀಯ ಸೈನಿಕರನ್ನು ಕೊಂದ ಪಾಕಿಸ್ತಾನದ ಕ್ರಮವನ್ನು ಖಂಡಿಸಿ ಪಾಕಿಸ್ತಾನದ ರೇಂಜರ್ಸ್ ವಿರುದ್ಧ ಬಿಎಸ್ಎಫ್ ಪ್ರಬಲ ಪ್ರತಿಭಟನೆ ನಡೆಸಿದೆ.
ಪಾಕಿಸ್ತಾನದಿಂಡ ಭಾರತ ಯೋಧರ ಹತ್ಯೆ, ಪ್ರಬಲ ಪ್ರತಿಭಟನೆ ದಾಖಲಿಸಿದ ಬಿಎಸ್ ಎಫ್
ಪಾಕಿಸ್ತಾನದಿಂಡ ಭಾರತ ಯೋಧರ ಹತ್ಯೆ, ಪ್ರಬಲ ಪ್ರತಿಭಟನೆ ದಾಖಲಿಸಿದ ಬಿಎಸ್ ಎಫ್
Updated on: 
ಜಮ್ಮು:  ಇಬ್ಬರು ಭಾರತೀಯ ಸೈನಿಕರನ್ನು ಕೊಂದ ಪಾಕಿಸ್ತಾನದ ಕ್ರಮವನ್ನು ಖಂಡಿಸಿ ಪಾಕಿಸ್ತಾನದ ರೇಂಜರ್ಸ್ ವಿರುದ್ಧ ಬಿಎಸ್ಎಫ್ ಪ್ರಬಲ ಪ್ರತಿಭಟನೆ ನಡೆಸಿದೆ.
ಜಮ್ಮು ಮತ್ತು ಕಾಶ್ಮೀರದ ಸುಚೇತ್ ಗಡ್ ಸೆಕ್ಟರ್ ಅಂತರರಾಷ್ಟ್ರೀಯ ಗಡಿಯಲ್ಲಿ ನಡೆದಿದ್ದ  ಧ್ವಜ ಸಭೆಯ ಸಂದರ್ಭದಲ್ಲಿ ಗಡಿ ಭದ್ರತಾ ಪಡೆ ಅಧಿಕಾರಿಗಳು (ಬಿಎಸ್ಎಫ್) ಔಪಚಾರಿಕವಾಗಿ ಈ ಪ್ರತಿಭಟನೆಯನ್ನು ನಡೆಸಿದ್ದರು. 
ಪಾಕ್ ಸೈನ್ಯದ ಕೋರಿಕೆಯ ಮೇರೆಗೆ ಬಿಎಸ್ ಎಫ್  ಮತ್ತು  ಪಾಕಿಸ್ತಾನ್ ರೇಂಜರ್ಸ್ ನ ಸೆಕ್ಟರ್ ಕಮಾಂಡರ್ಗಳ ನಡುವೆ ಇಂದು ಧ್ವಜ ಸಭೆ ನಡೆದಿತ್ತು ಈ ವೇಳೆ ಬಿಎಸ್ಎಫ್ ಪಾಕಿಸ್ತಾನ ಇಬ್ಬರು ಬಿಎಸ್ಎಫ್ ಸೈನಿಕರನ್ನು ಹೊಡೆದುಹಾಕುವುದು ಮತ್ತು ಗಡಿ ಭಾಗದ ಅನೇಕ ಭಾರತೀಯ ಹಳ್ಳಿಗಳು, ಮುಗ್ಧ ನಾಗರಿಕರು ಮತ್ತು ಅವರ ಆಸ್ತಿಗಳನ್ನು ಗುರಿಯಾಗಿಸಿಕೊಂಡು ಪದೇ ಪದೇ ಅಪ್ರಚೋದಿತ ಗುಂಡಿನ ದಾಳಿ, ಶೆಲ್ ದಾಲಿ ನಡೆಸುವುದನ್ನು ಬಲವಾಗಿ ವಿರೋಧಿಸಲಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದೆ.
"ಇಂತಹ ಪ್ರಚೋದನಕಾರಿ ಕೃತ್ಯಗಳನ್ನು ನಾವು ಒಪ್ಪುವುದಿಲ್ಲ ಎಂದು ಬಲವಾದ ಮಾತುಗಳಲ್ಲಿ ನಾವು ಪ್ರತಿಭಟನೆ ಸಲ್ಲಿಸಿದ್ದೇವೆ" ಎಂದು ಓರ್ವ ಸೇನಾಧಿಕಾರಿಗಳು ಹೇಳಿದ್ದಾರೆ.
ಇದು ಈ ವರ್ಷ ಎರಡೂ ಸೆಕ್ಟರ್ ಕಮಾಂಡರ್ ಗಳ ನಡುವೆ ನಡೆದ ಮೊದಲ ಧ್ವಜ ಸಭೆಯಾಗಿದೆ. ಇದಕ್ಕೂ ಹಿಂದೆ ಕಳೆದ ವರ್ಷ ಸೆಪ್ಟೆಂಬರ್ 29 ರಂದು ಧ್ವಜ ಸಭೆ ನಡೆದಿತ್ತು. ಇಂದಿನ ಧ್ವಜ ಸಭೆಗೆ ಭಾರತ ಪರವಾಗಿ ಬಿಎಸ್ ಎಫ್ ನ ಸಬ್ ಇನ್ಸ್ಪೆಕ್ಟರ್ ಜನರಲ್ ಪಿಎಸ್ ಧಿಮಾನ್ ಮತ್ತು ಚೆನಾಬ್ ರೇಂಜರ್ಸ್ ನ ಬ್ರಿಗೇಡಿಯರ್ ಅಂಜದ್ ಹುಸೇನ್ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com