ಭಾರತ-ಕಾಂಬೋಡಿಯಾ ಪ್ರಧಾನಿಗಳ ಭೇಟಿ, ನಾಲ್ಕು ಮಹತ್ವದ ಒಪ್ಪಂದಗಳಿಗೆ ಸಹಿ

ಭಾರತ ಹಾಗೂ ಕಾಂಬೋಡಿಯಾ ಇಂದು ಅಪರಾಧಗಳ ತನಿಖೆ ಮತ್ತು ಅಪರಾಧ ತಡೆಗಟ್ಟುವಿಕೆ ವಿಷಯಗಳಲ್ಲಿ ಕಾನೂನು ನೆರವು ಸೇರಿದಂತೆ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ.
ಭಾರತ-ಕಾಂಬೋಡಿಯಾ ಪ್ರಧಾನಿಗಳ ಬೇಟಿ, ನಾಲ್ಕು ಮಹತ್ವದ ಒಪ್ಪಂದಗಳಿಗೆ  ಸಹಿ
ಭಾರತ-ಕಾಂಬೋಡಿಯಾ ಪ್ರಧಾನಿಗಳ ಬೇಟಿ, ನಾಲ್ಕು ಮಹತ್ವದ ಒಪ್ಪಂದಗಳಿಗೆ ಸಹಿ
ನವದೆಹಲಿ: ಭಾರತ ಹಾಗೂ ಕಾಂಬೋಡಿಯಾ ಇಂದು ಅಪರಾಧಗಳ ತನಿಖೆ ಮತ್ತು ಅಪರಾಧ ತಡೆಗಟ್ಟುವಿಕೆ ವಿಷಯಗಳಲ್ಲಿ ಕಾನೂನು ನೆರವು ಸೇರಿದಂತೆ ನಾಲ್ಕು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ. ಕಾಂಬೋಡಿಯಾದ ಸ್ಟುಂಗ್ ಎಸ್ವಾ ಹ್ಯಾಬ್ ಜಲ ಸಂಪನ್ಮೂಲ ಅಭಿವೃದ್ಧಿ ಯೋಜನೆಗೆ 36.92 ಮಿಲಿಯನ್ ಅಮೆರಿಕನ್ ಡಾಲರ್ ನೀಡಿಕೆಯು ಸಹ ಇದರಲ್ಲಿ ಒಳಗೊಂಡಿದೆ.
ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಬೋಡಿಯಾ ಪ್ರಧಾನಿ ಸಾಮ್ದೆಕ್ ಹನ್ ಸೇನ್ ಪರಸ್ಪರ ಮಾತುಕತೆ ನಡೆಸಿದ ಬಳಿಕ ರಕ್ಷಣಾ ವಲಯದಲ್ಲಿ ಉನ್ನತ ಮಟ್ಟದ ಸಹಕಾರ ನೀಡುವುದರೊಡನೆ ಎರಡೂ ರಾಷ್ಟ್ರಗಳ ರಕ್ಷಣ ಸಂಬಂಧ ಬಲವರ್ಧೆನೆಗೆ ನೆರವು ನೀಡಲು ಒಪ್ಪಿಗೆ ಸೂಚಿಸಲಾಗಿದೆ.
ವ್ಯಾಪಾರ ಮತ್ತು ಹೂಡಿಕೆ, ಶಕ್ತಿ ಸಂರಕ್ಷಣೆ, ಕೃಷಿ ಮತ್ತು ಪ್ರವಾಸೋದ್ಯಮ -ಸಂಸ್ಕೃತಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಅಭಿವೃದ್ದಿ ಪಾಲುದಾರಿಕೆಗಳನ್ನು ದ್ವಿಗುಣಗೊಳಿಸುವುದು ತನ್ಮೂಲಕ ಸಂಬಂಧಗಳನ್ನು ಉತ್ತಮಗೊಳಿಸಲು ಮಾರ್ಗಗಳನ್ನು ಅನ್ವೇಷಿಸುವುದರ ಕುರಿತು ಇಂದು ದ್ವಿಪಕ್ಷೀಯ ಮಾತುಕತೆಗಳಲ್ಲಿ ಚರ್ಚೆಗಳಾದವು. ಈ ವೇಳೆ ಮಾನವ ಕಳ್ಳಸಾಗಣೆಗೆ ತಡೆಗಟ್ಟುವಿಕೆ, ಸಮಸ್ಯೆಯನ್ನು ಪಾರುಗಾಣಿಸುವ ಸಂಬಂಧಿತ ವಿಷಯಗಳ ಬಗ್ಗೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲು ಎರಡು ದೇಶಗಳು ಒಪ್ಪಂದಕ್ಕೆ ಬಂದಿವೆ. 2018-2020 ರವರೆಗೆ ಸಾಂಸ್ಕೃತಿಕ ವಿನಿಮಯಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಭಾರತ ಕಾಂಬೋಡಿಯಾ ಸಂಬಂಧಗಳು ಕ್ರಿಶ 1 ನೇ ಶತಮಾನದಷ್ಟು ಹಳೆಯದಾಗಿದ್ದು ಹಿಂದೂ ಮತ್ತು ಬೌದ್ಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಭಾವಗಳು ಭಾರತದಿಂದ ಆಗ್ನೇಯ ಏಷ್ಯಾದ ವಿವಿಧ ಭಾಗಗಳಿಗೆ ವಿಸ್ತರಿಸುವ ವೇಳೆಯಲ್ಲಿ  ಕಾಂಬೋಡಿಯಾ ಸಹ ಇದರ ಪ್ರಭಾವಲಯದ ಒಳಗಿತ್ತು ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಮೂಲಗಳು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com