ಟ್ಯಾಂಕರ್ ನಿರೋಧಕ ಕ್ಷಿಪಣಿಗಳ ತೀವ್ರ ಕೊರತೆ; ಕೇಂದ್ರಕ್ಕೆ ಭಾರತೀಯ ಸೇನೆ ಮನವಿ

ವಿಶ್ವದ ಬಲಿಷ್ಟ ಸೇನೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಮತ್ತು ಚೀನಾದ ಬಳಿಕ ವಿಶ್ವದ ಸೂಪರ್ ಪವರ್ ರಾಷ್ಟ್ರವಾಗುವತ್ತ ದಾಪುಗಾಲಿರಿಸುತ್ತಿರುವ ಭಾರತೀಯ ಸೇನೆಯಲ್ಲಿ ಟ್ಯಾಂಕರ್ ನಿರೋಧಕ ಕ್ಷಿಪಣಿಗಳ ತೀವ್ರ ಕೊರತೆ ಇದೆ ಎಂದು ಹೇಳಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ವಿಶ್ವದ ಬಲಿಷ್ಟ ಸೇನೆಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿರುವ ಮತ್ತು ಚೀನಾದ ಬಳಿಕ ವಿಶ್ವದ ಸೂಪರ್ ಪವರ್ ರಾಷ್ಟ್ರವಾಗುವತ್ತ ದಾಪುಗಾಲಿರಿಸುತ್ತಿರುವ ಭಾರತೀಯ ಸೇನೆಯಲ್ಲಿ ಟ್ಯಾಂಕರ್ ನಿರೋಧಕ  ಕ್ಷಿಪಣಿಗಳ ತೀವ್ರ ಕೊರತೆ ಇದೆ ಎಂದು ಹೇಳಲಾಗಿದೆ.
ಈ ಬಗ್ಗೆ ಸ್ವತಃ ಭಾರತೀಯ ಸೇನೆಯ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದು, ಶೀಘ್ರ ಸೇನೆಗೆ ಟ್ಯಾಂಕರ್ ನಿರೋಧಕ ಕ್ಷಿಪಣಿಗಳನ್ನು ಪೂರೈಕೆ ಮಾಡುವಂತೆ ಮನವಿ ಮಾಡಿದೆ. ಪ್ರಸ್ತುತ ಸೇನೆಗೆ ಟ್ಯಾಂಕರ್ ಗಳನ್ನು  ನಾಶಪಡಿಸಬಲ್ಲ ಟ್ಯಾಂಕರ್ ನಿರೋಧಕ ಕ್ಷಿಪಣಿ ವ್ಯವಸ್ಥೆಯ ಅಗತ್ಯವಿದ್ದು, ಈಗಿರುವ ಕ್ಷಿಪಣಿ ವ್ಯವಸ್ಥೆಯ ಯಾವುದಕ್ಕೂ ಸಾಲದೆಂಬಂತಾಗಿದೆ. ಹೀಗಾಗಿ ಸೇನೆಗೆ ತುರ್ತಾಗಿ ಸ್ವದೇಶಿ ನಿರ್ಮಿತ ಟ್ಯಾಂಕರ್ ನಿರೋಧಕ ಕ್ಷಿಪಣಿಗಳನ್ನು  ಪೂರೈಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೇನೆ ಮನವಿ ಮಾಡಿದೆ.
ಮೂಲಗಳ ಪ್ರಕಾರ ಸೇನೆ ಬಳಿ ಪ್ರಸ್ತುತ 2,500 ಟ್ಯಾಂಕರ್ ನಿರೋಧಕ ಕ್ಷಿಪಣಿಗಳು, 96 ಮೊಬೈಲ್ ಕ್ಷಿಪಣಿ ಲಾಂಚರ್ ಗಳು ಮಾತ್ರ ಇದ್ದು, ಸೇನೆಗೆ ಸುಮಾರು 68,000 ಸಾವಿರ ಟ್ಯಾಂಕರ್ ನಿರೋಧಕ ಕ್ಷಿಪಣಿಗಳು ಹಾಗೂ 850  ಮೊಬೈಲ್ ಕ್ಷಿಪಣಿ ಲಾಂಚರ್ ಗಳ ತುರ್ತು ಅವಶ್ಯಕತೆ ಇದೆ. ಸಾಮಾನ್ಯವಾಗಿ ಶತ್ರು ಪಾಳಯದ ಸೈನಿಕರು ಹಾಗೂ ಅವರ ಟ್ಯಾಂಕರ್ ಗಳು ಮುಗ್ಗುವುದನ್ನು ತಡೆಯಲು ಈ ಆ್ಯಂಟಿ ಟ್ಯಾಂಕರ್ ಮಿಸೈಲ್ ಗಳು ತಡೆಯುವಲ್ಲಿ ಪ್ರಮುಖ  ಪಾತ್ರವಹಿಸುತ್ತವೆ. ಅಲ್ಲದೆ ಗಡಿ ಸುರಕ್ಷೆತೆಯಲ್ಲೂ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ತುರ್ತಾಗಿ ಸೇನೆಗೆ 68 ಸಾವಿರ ಟ್ಯಾಂಕರ್ ನಿರೋಧಕ ಕ್ಷಿಪಣಿಗಳು ತುರ್ತಾಗಿ ಬೇಕಾಗಿದೆ ಎಂದು ಸೇನೆ ಹೇಳಿದೆ.
ಒಟ್ಟಾರೆ ಪಾಕಿಸ್ತಾನ ಮತ್ತು ಚೀನಾ ದೇಶಗಳ ಸೈನಿಕರು ಗಡಿಯಲ್ಲಿ ಕಾಲು ಕೆರೆಯುತ್ತಿರುವ ಈ ಹೊತ್ತಿನಲ್ಲಿ ಭಾರತೀಯ ಸೇನೆಯ ತುರ್ತು ಅಗತ್ಯತೆಗಳನ್ನೂ ಪೂರೈಕೆ ಮಾಡುವ ಅನಿವಾರ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com