

ದೆಹಲಿ: ಇಂದಿನಿಂದ ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ಈ ಬಾರಿಯ ಬಜೆಟ್ ನಲ್ಲಿ ಪ್ರತಿಯೊಬ್ಬರ ಆಶಯ ಈಡೇರಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ.
ಸಂಸತ್ ಭವನದ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಪ್ರಗತಿಯತ್ತ ಮುನ್ನುಗ್ಗುತ್ತಿದೆ. ದೇಶದ ಎಲ್ಲಾ ಕ್ಷೇತ್ರಗಳಲ್ಲಿಯೂ ಬೆಳವಣಿಗೆಯಾಗುತ್ತಿದ್ದು, ಒಳ್ಳೆಯ ಅಭಿಪ್ರಾಯಗಳು ಮೂಡಿಬರುತ್ತಿವೆ ಎಂದರು.
ಬಜೆಟ್ ನಲ್ಲಿನ ಆಶಯ ಕುರಿತು ಚರ್ಚಚಿಸಲು ಸಂಸದೀಯ ಸಮಿತಿಯ ಸಲಹೆಯನ್ನು ಬಳಸಿಕೊಳ್ಳಲಾಗುವುದು, ಗ್ರಾಮೀಣ ಭಾರತ, ಕೃಷಿಕರು, ಪರಿಶಿಷ್ಟ ಜಾತಿ ಮತ್ತು ಪಂಗಡ ಮತ್ತು ಕಾರ್ಮಿಕ ಸಮುದಾಯದ ಬಲವರ್ದನೆಗೆ ಚಿಂತನೆ ಮಾಡಿರುವುದಾಗಿ ತಿಳಿಸಿದರು.
ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿ ತ್ರಿವಳಿ ತಲಾಖ್ ಮಸೂದೆ ಬಜೆಟ್ ಅಧಿವೇಶನದಲ್ಲಿಯೇ ಕಾಯ್ದೆಯಾಗಿ ಜಾರಿಯಾಗಲು ಎಲ್ಲಾ ಪಕ್ಷಗಳು ಬೆಂಬಲ ನೀಡಬೇಕೆಂದು ಇದೇ ವೇಳೆ ಪ್ರಧಾನಿ ನರೇಂದ್ರಮೋದಿ ಮನವಿ ಮಾಡಿಕೊಂಡರು.