ಕೇರಳ: ನೃತ್ಯ ಮಾಡುತ್ತಲೇ ಕುಸಿದು ಪ್ರಾಣಬಿಟ್ಟ ಓಟ್ಟಮ್‍ತುಳ್ಳಲ್ ಕಲಾವಿದ ಕಲಾಮಂಡಲಂ ಗೀಥನಂದನ್

ಕೇರಳದ ಪ್ರಸಿದ್ದ ಓಟ್ಟಮ್‍ತುಳ್ಳಲ್ ಕಲಾವಿದ ಕಲಾಮಂಡಲಂ ಗೀಥನಂದನ್ (58) ರಂಗಸ್ಥಳದಲ್ಲಿ ಪ್ರದರ್ಶನ ನೀಡುತ್ತಿರುವ ವೇಳೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕಲಾಮಂಡಲಂ ಗೀಥನಂದನ್
ಕಲಾಮಂಡಲಂ ಗೀಥನಂದನ್
Updated on: 
ತ್ರಿಶೂರ್: ಕೇರಳದ ಪ್ರಸಿದ್ದ ಓಟ್ಟಮ್‍ತುಳ್ಳಲ್ ಕಲಾವಿದ ಕಲಾಮಂಡಲಂ ಗೀಥನಂದನ್ (58) ರಂಗಸ್ಥಳದಲ್ಲಿ ಪ್ರದರ್ಶನ ನೀಡುತ್ತಿರುವ ವೇಳೆಯಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ತ್ರಿಶೂರ್ ಜಿಲ್ಲೆಯ ಇರಿಂಙಲಕ್ಕುಡದಲ್ಲಿರುವ ಅವಿಟ್ಟತ್ತೂರ್ ದೇವಸ್ಥಾನದಲ್ಲಿ ನಡೆಯುತ್ತಿದ್ದ ವಾರ್ಷಾವಧಿ ಉತ್ಸವದ ಸಮಯದಲ್ಲಿ ಓಟ್ಟಮ್‍ತುಳ್ಳಲ್ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ರಂಗಸ್ಥಳದಲ್ಲಿ ನರ್ತಿಸುತ್ತಿದ್ದ ಗೀಥನಂದನ್ ಗೆ ಹೃದಯಾಘಾತವಾಗಿದ್ದು ಕುಸಿದಿ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು.
ತಮ್ಮ ಒಂಭತ್ತನೇ ವರ್ಷದಿಂದ ಇಂದಿನವರೆಗೆ ಸುಮಾರು 5,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನಿಡಿದ್ದ ಗೀಥನಂದನ್ ಕೇರಳ ಕಲಾಮಂಡಲಂ ನಲ್ಲಿ ಓಟ್ಟಮ್‍ತುಳ್ಳಲ್ ಶಿಕ್ಷಕರಾಗಿದ್ದರಲ್ಲದೆ ಆ ವಿಭಾಗದ ಮುಖ್ಯಸ್ಥರಾಗಿ ಹಲವು ವರ್ಷ ಸೇವೆ ಸಲ್ಲಿಸಿದ್ದರು. ಫ್ರಾನ್ಸ್ ನಲ್ಲಿ ಓಟ್ಟಮ್‍ತುಳ್ಳಲ್ ಪ್ರದರ್ಶನ ನೀಡಿದ ಮೊಟ್ಟ ಮೊದಲ ಕಲಾವಿದ ಇವರಾಗಿದ್ದರು.
ಇದಲ್ಲದೆ ಗೀಥನಂದನ್ ಮಲಯಾಳಂ ಚಿತ್ರಗಳಲ್ಲಿ ಸಹ ಅಭಿನಯಿಸಿದ್ದು ಮಲಯಾಳಂ ಪ್ರಸಿದ್ಧ ನಟ ಮೋಹನ್ ಲಾಲ್ ಅವರೊಡನೆ ತೆರೆ ಹಂಚಿಕೊಂಡಿದ್ದರು. ತೋವಲ್ ಕೊಟ್ಟಾರಾಂ, ಮನಸಿನಕ್ಕರೆ, ನರೇಂದ್ರನ್ ಮಗನ್ ಜಯಕಾಂತನ್ ವ್ಯಾಗಾ ಇದೇ ಮೊದಲಾದ ಮೂವತ್ತಕ್ಕೂ ಹೆಚ್ಚು ಚಿತ್ರದಲ್ಲಿ ಅಭಿನಯಿಸಿದ್ದ ಗೀಥನಂದನ್ ಅವರಿಗೆ 2000ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 2010ರಲ್ಲಿ ಕಲಾಮಂದಲ್ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿದೆ.
ಇಂತಹಾ ಮೇರು ಕಲಾವಿದರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ರಂಗಸ್ಥಳದಲ್ಲೇ ಕೊನೆಯುಸಿರೆಳೆದಿದ್ದ ಗಂಗಯ್ಯ ಶೆಟ್ಟಿ
ಕಟೀಲು ಮೇಳದ ಯಕ್ಷಗಾನ ಕಲಾವಿದರಾಗಿದ್ದ ಗೇರುಕಟ್ಟೆ ಗಂಗಯ್ಯ ಶೆಟ್ಟಿ (63) ಸಹ  ಪಾತ್ರ ಮಾಡುತ್ತಿದ್ದಾಗಲೇ ವೇದಿಕೆಯಲ್ಲಿಯೇ ಕುಸಿದು ಕೊನೆಯುಸಿರೆಳೆದಿದ್ದರು. 2017ರ ಮಾರ್ಚ್ ನಲ್ಲಿ  ಅವರು ಮೃತಪಟ್ಟಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com