ವೈದ್ಯಕೀಯ ಕಾಲೇಜ್ ಪ್ರವೇಶ ಹಗರಣ: ಸಿಜೆಐ ದೀಪಕ್ ಮಿಶ್ರಾ ತತ್ತ್ವಬದ್ಧ ತೀರ್ಮಾನ -ಕಾಂಗ್ರೆಸ್

ವೈದ್ಯಕೀಯ ಕಾಲೇಜ್ ಪ್ರವೇಶ ಹಗರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ಎಸ್, ಎನ್ ಶುಕ್ಲಾ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ತತ್ವಬದ್ಧ ತೀರ್ಪು ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ದೆಹಲಿಯಲ್ಲಿ ನಿನ್ನೆ ನಡೆಸಿದ ಸುದ್ದಿಗೋಷ್ಠಿಯ ಚಿತ್ರ
ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ದೆಹಲಿಯಲ್ಲಿ ನಿನ್ನೆ ನಡೆಸಿದ ಸುದ್ದಿಗೋಷ್ಠಿಯ ಚಿತ್ರ
Updated on: 

ನವದೆಹಲಿ: ವೈದ್ಯಕೀಯ ಕಾಲೇಜ್  ಪ್ರವೇಶ  ಹಗರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್  ಹೈಕೋರ್ಟ್ ನ್ಯಾಯಾಧೀಶ ಎಸ್, ಎನ್ ಶುಕ್ಲಾ ಅವರ ಪ್ರಕರಣದಲ್ಲಿ   ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ತತ್ವಬದ್ಧ ತೀರ್ಪು ನೀಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಈ  ಸಂಬಂಧ ದೀಪಕ್ ಮಿಶ್ರಾ ಅವರನ್ನು ಅಭಿನಂದಿಸಲಾಗುವುದು ಹಾಗೂ ಎಲ್ಲಾ ಪ್ರಕರಣಗಳಲ್ಲೂ ಇದನ್ನು ಅಳವಡಿಸಿಕೊಳ್ಳಬೇಕೆಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.

ವೈದ್ಯಕೀಯ ಕಾಲೇಜ್ ಪ್ರವೇಶ  ಹಗರಣದ ಆಂತರಿಕಾ ತನಿಖೆ ವೇಳೆ ಎಸ್.ಎನ್. ಶುಕ್ಲಾ ದೋಷಿ ಎನ್ನಲಾಗಿತ್ತು.  ಶುಕ್ಲಾ ಮೇಲಿನ ಪ್ರಕರಣವನ್ನು ದೀಪಕ್ ಮಿಶ್ರಾ ವಜಾಗೊಳಿಸಿದ್ದರು

ಸುಪ್ರೀಂಕೋರ್ಟ್ ನ ಆಯ್ದ ಪ್ರಕರಣಗಳ ವಿಚಾರಣೆಗೆ ಸಂಬಂಧಿಸಿದಂತೆ ದೀಪಕ್ ಮಿಶ್ರಾ ಅವರ ನಡೆಯನ್ನು   ಜನವರಿ 12 ರಂದು ಸುಪ್ರೀಂಕೋರ್ಟಿನ ನಾಲ್ವರು ಹಿರಿಯ ಸದಸ್ಯರು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com