ದೇಶದ ಮೊದಲ ಮಂಗಳಮುಖಿ ವಕೀಲೆಯಾದ ಸತ್ಯಶ್ರೀ ಶರ್ಮಿಳಾ
ದೇಶದ ಮೊದಲ ಮಂಗಳಮುಖಿ ವಕೀಲೆಯಾದ ಸತ್ಯಶ್ರೀ ಶರ್ಮಿಳಾ

ಸತ್ಯಶ್ರೀ ಶರ್ಮಿಳಾ: ದೇಶದ ಮೊಟ್ಟ ಮೊದಲ ತೃತೀಯ ಲಿಂಗಿ ವಕೀಲೆ

ಮುಖ್ಯವಾಹಿನಿಗೆ ಬರಲು ಹಿಂಜರಿಯುತ್ತಿದ್ದ ತೃತೀಯಲಿಂಗಿಗಳು ಅಥವಾ ಮಂಗಳಮುಖಿಯರು ಇತ್ತೀಚಿನ ದಿನಗಳಲ್ಲಿ ಮಾಡೆಲಿಂಗ್, ನಟಿ, ಎಸ್ಐ, ಸುದ್ದಿ ವಾಚಕಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಲಗ್ಗೆ ಇಡಲು ಆರಂಭಿಸಿದ್ದು, ಇದೀಗ ವಕೀಲ ವೃತ್ತಿಗೂ ಪಾದಾರ್ಪಣೆ ಮಾಡಿದ್ದಾರೆ...
ಚೆನ್ನೈ: ಮುಖ್ಯವಾಹಿನಿಗೆ ಬರಲು ಹಿಂಜರಿಯುತ್ತಿದ್ದ ತೃತೀಯಲಿಂಗಿಗಳು ಅಥವಾ ಮಂಗಳಮುಖಿಯರು ಇತ್ತೀಚಿನ ದಿನಗಳಲ್ಲಿ ಮಾಡೆಲಿಂಗ್, ನಟಿ, ಎಸ್ಐ, ಸುದ್ದಿ ವಾಚಕಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೆ ಲಗ್ಗೆ ಇಡಲು ಆರಂಭಿಸಿದ್ದು,  ಇದೀಗ ವಕೀಲ ವೃತ್ತಿಗೂ ಪಾದಾರ್ಪಣೆ ಮಾಡಿದ್ದಾರೆ.
ತೃತೀಯ ಲಿಂಗಿಯೊಬ್ಬರು ವಕೀಲೆಯಾಗುವ ಮೂಲಕ ದೇಶದ ಮೊದಲ ಮಂಗಳಮುಖಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
ಚೆನ್ನೈ ಮೂಲದ ಸತ್ಯಶ್ರೀ ಶರ್ಮಿಳಾ ಎಂಬುವವರು ದೇಶದ ಮೊದಲ ತೃತೀಯಲಿಂಗಿ
ವಕೀಲೆಯಾಗಿದ್ದಾರೆ. 
ಪಾಂಡಿಚೇರಿ ಹಾಗೂ ತಮಿಳುನಾಡು ರಾಜ್ಯಗಳ ಬಾರ್ ಕೌನ್ಸಿಲ್ ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದ ಸತ್ಯಶ್ರೀ ಅವರು, ಸಾಕಷ್ಟು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸಿದ ಬಳಿಕ ಕೊನೆಗೂ ವಕೀಲೆಯಾಗಿದ್ದಾರೆ. 
ತಮ್ಮ ಸಮುದಾಯದವರ ಸಹಕಾರ, ಬೆಂಬಲದೊಂದಿಗೆ ಸಮಾಜದಲ್ಲಿ ಮೇಲೆ ಬಂದ ಸತ್ಯಶ್ರೀಯವರು ಮುಂದೆ ತಮ್ಮ ಸಮಾಜ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಆಸೆಯನ್ನು ಹೊಂದಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com