ರೈತನ ಜಮೀನಿಗೆ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಕಾವಲು!

ಸಂಗಾರೆಡ್ಡಿ ಜಿಲ್ಲೆಯ ಕೊಂಡಾರೆಡ್ಡಿ ಪಂಚಾಯ್ತಿಯ ಗೊಲ್ಲಪಲ್ಲಿ ರೈತ 30 ವರ್ಷದ ಅನ್ವರ್ ತಮ್ಮ ಜಮೀನಿನಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ...
ಕಾಜಲ್ ಅಗರ್ವಾಲ್
ಕಾಜಲ್ ಅಗರ್ವಾಲ್
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಚೆನ್ನಾ ರೆಡ್ಡಿ ಎಂಬ ರೈತ ತಾನು ಬೆಳೆದಿರುವ ಬೆಳೆಗಳಿಗೆ ದಾರಿಹೋಕರ ದೃಷ್ಟಿ ತಾಕಬಾರದು ಎಂಬ ಉದ್ದೇಶದಿಂದ ಮಾಜಿ ನೀಲಿ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್ ಕಟೌಟ್ ಅನ್ನು ಹೊಲದ ಮಧ್ಯೆ ಹಾಕಿದ್ದರು. ಇದೇ ಉಪಾಯವನ್ನು ತೆಲಂಗಾಣದ ರೈತರೊಬ್ಬರು ಬಳಸಿಕೊಂಡಿದ್ದು ಇಲ್ಲಿ ಸನ್ನಿ ಬದಲಿಗೆ ಕಾಜಲ್ ಅಗರ್ವಾಲ್ ಕಟೌಟ್ ಕಾಣಸಿಗಲಿದೆ. 
ಸಂಗಾರೆಡ್ಡಿ ಜಿಲ್ಲೆಯ ಕೊಂಡಾರೆಡ್ಡಿ ಪಂಚಾಯ್ತಿಯ ಗೊಲ್ಲಪಲ್ಲಿ ರೈತ 30 ವರ್ಷದ ಅನ್ವರ್ ತಮ್ಮ ಜಮೀನಿನಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ. ಹೆದ್ದಾರಿ ಪಕ್ಕದಲ್ಲೇ ತಮ್ಮ ಜಮೀನು ಇರುವುದರಿಂದ ತಾವು ಬೆಳೆದಿರುವ ಬೆಳೆಗೆ ದಾರಿಹೋಕರ ದೃಷ್ಟಿ ತಾಕದಂತೆ ಮಾಡಲು ನಟಿ ಕಾಜಲ್ ಅಗರ್ವಾಲ್ ಕಟೌಟ್ ಅನ್ನು ಹಾಕಿದ್ದಾರೆ. 
ಇದರಿಂದ ಬಹುತೇಕರು ಬೆಳೆಯ ಕಡೆ ತಮ್ಮ ಗಮನ ಹರಿಸದೇ ತಮ್ಮ ನೆಚ್ಚಿನ ನಟಿಯನ್ನು ಕಂಡು ಮುಂದೆ ಸಾಗುತ್ತಿದ್ದಾರೆ. ಇದರಿಂದ ಈ ಸಲ ಬೆಳೆ ಸಮೃದ್ಧವಾಗಿ ಬೆಳೆದಿದೆ ಎಂಬುದು ಕಣ್ಣಿಗೆ ಕಾಣುತ್ತಿರುವ ಸತ್ಯ ಎಂಬುದು ಅನ್ವರ್ ವಾದವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com