ಹೊಸ 2000, 500 ರೂಪಾಯಿ ಮುಖಬೆಲೆಯ ನೋಟುಗಳನ್ನು ದೇಶಾದ್ಯಂತ ವೇಗವಾಗಿ ತಲುಪಿಸಲು ವಾಯುಪಡೆಯ ಸಿ-17, ಸಿ-130 ಜೆ ಸೂಪರ್ ಹರ್ಕ್ಯುಲಸ್ ಹೆಲಿಕಾಫ್ಟರ್ ಗಳನ್ನು ಬಳಕೆ ಮಾಡಲಾಗಿತ್ತು. ಈ ಕುರಿತು ಆರ್ ಟಿಐ ಮೂಲಕ ಮಾಹಿತಿ ಕೇಳಲಾಗಿತ್ತು, "91 ಟ್ರಿಪ್ ಮೂಲಕ ಹೊಸ 2000, 500 ರೂಪಾಯಿ ಮುಖಬೆಲೆಯ ನೋಟುಗಳನ್ನು ತಲುಪಿಸಲಾಗಿತ್ತು. ಇದಕ್ಕಾಗಿ 29.41 ಕೋಟಿ ರೂಪಾಯಿ ಬಿಲ್ ನ್ನು ವಾಯುಪಡೆ ನೀಡಿದೆ ಎಂದು ಆರ್ ಟಿಐ ಮಾಹಿತಿ ಮೂಲಕ ಬಹಿರಂಗಗೊಂಡಿದೆ.