ಎಕ್ಸ್ ಪ್ರೆಸ್ ಹೆರಿಗೆ: ರೈಲಿನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

30 ವರ್ಷದ ಮಹಿಳೆಯೊಬ್ಬರು ಮುಂಬೈ-ವಿಶಾಖಪಟ್ಟಣಂ ರೈಲಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
Express delivery: Woman gives birth to twins on train!
Express delivery: Woman gives birth to twins on train!
Updated on: 
ಮುಂಬೈ: 30 ವರ್ಷದ ಮಹಿಳೆಯೊಬ್ಬರು ಮುಂಬೈ-ವಿಶಾಖಪಟ್ಟಣಂ ರೈಲಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. 
ಒಂದು ಹೆಣ್ಣು, ಮತ್ತೊಂದು ಗಂಡು ಮಗುವಿಗೆ ಮಹಿಳೆ ರೈಲಿನಲ್ಲಿ ಜನ್ಮ ನೀಡಿದ್ದಾರೆ. ಶೇಖ್ ತಬಾಸ್ಸಮ್ ಎಂಬುವವರು ತಮ್ಮ ಕುಟುಂಬ ಸದಸ್ಯರೊಂದಿಗೆ ಮುಂಬೈ-ವಿಶಾಖಪಟ್ಟಣಂ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆಯಲ್ಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯಕೀಯ ಸೇವೆ ತುರ್ತಾಗಿ ಅಗತ್ಯವಿದೆ ಎಂಬ ಮಾಹಿತಿಯನ್ನು ತಿಳಿಯುತ್ತಿದ್ದಂತೆಯೇ ರೈಲನ್ನು ಮುಂಬೈ ನಿಂದ 51 ಕಿಮೀ ದೂರದಲ್ಲಿರುವ ಕಲ್ಯಾಣ್ ನಲ್ಲಿ ನಿಲ್ಲಿಸಲಾಯಿತು. ನಂತರ ವೈದ್ಯಕೀಯ ಸಿಬ್ಬಂದಿ ಆಗಮಿಸಿದರು. ಹೆರಿಗೆ ನಂತರ ಮಕ್ಕಳು ಹಾಗೂ ತಾಯಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com