ನರೇಂದ್ರ ಮೋದಿ
ನರೇಂದ್ರ ಮೋದಿ

ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ 1,484 ಕೋಟಿ ರೂ. ವೆಚ್ಚ: ಕೇಂದ್ರ ಸರ್ಕಾರ

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ 2014ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ 84 ದೇಶಗಳಿಗೆ ಭೇಟಿ ನೀಡಿದ್ದು ಅದಕ್ಕಾಗಿ 1,484 ಕೋಟಿ ರುಪಾಯಿ ವೆಚ್ಚವಾಗಿದೆ...
ನವದೆಹಲಿ: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ 2014ರಲ್ಲಿ ಅಧಿಕಾರ ಸ್ವೀಕರಿಸಿದ ನಂತರ 84 ದೇಶಗಳಿಗೆ ಭೇಟಿ ನೀಡಿದ್ದು ಅದಕ್ಕಾಗಿ 1,484 ಕೋಟಿ ರುಪಾಯಿ ವೆಚ್ಚವಾಗಿದೆ ಎಂದು ವಿದೇಶಾಂಗ ಖಾತೆ ಸಹಾಯಕ ಸಚಿವ ವಿಕೆ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ. 
ಪ್ರಧಾನಿಯವರ ವಿಮಾನದ ನಿರ್ವಹಣೆಗೆ 1,088.42 ಕೋಟಿ ರು. ಚಾರ್ಟರ್ಡ್ ವಿಮಾನದ ಬಳಕೆಗೆ 387.26 ಕೋಟಿ ರುಪಾಯಿ ವೆಚ್ಚ ಮಾಡಲಾಗಿದೆ. 2014ರ ಜೂನ್ 15ರಿಂದ 2018ರರ ಜೂನ್ 10ರವರೆಗಿನ ಅವಧಿಯಲ್ಲಿನ ವೆಚ್ಚ ಇದಾಗಿದೆ ಎಂದರು. 
2015-16ನೇ ಸಾಲಿನಲ್ಲಿ ಪ್ರಧಾನಿ ಮೋದಿ 24, 2016-17ನೇ ಸಾಲಿನಲ್ಲಿ 18, 2017-18ನೇ ಸಾಲಿನಲ್ಲಿ 19 ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು ಎಂದು ವಿಕೆ ಸಿಂಗ್ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com