ಪಿಎನ್ ಬಿ ಹಗರಣ : ಅಂಟಿಗುವಾದಲ್ಲಿರುವ ಮೆಹುಲ್ ಚೊಕ್ಸಿ ಬಂಧನಕ್ಕೆ ಮುಂದಾದ ಭಾರತ

ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ಮೆಹುಲ್ ಚೊಕ್ಸಿ ಕೆರಿಬಿಯನ್ ದ್ವೀಪ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಬಂದಿದ್ದು, ಆತನನ್ನು ಬಂಧಿಸುವಂತೆ ಭಾರತ , ಅಂಟಿಗುವಾ ಹಾಗೂ ಬರ್ಬುಡಾ ರಾಷ್ಟ್ರಗಳನ್ನು ಕೋರಿದೆ.
ಮೆಹುಲ್ ಚೊಕ್ಸಿ
ಮೆಹುಲ್ ಚೊಕ್ಸಿ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಸಾವಿರಾರು ಕೋಟಿ ರೂಪಾಯಿ ವಂಚಿಸಿ  ವಿದೇಶದಲ್ಲಿ ತಲೆಮರೆಸಿಕೊಂಡಿರುವ  ವಜ್ರದ ವ್ಯಾಪಾರಿ ಮೆಹುಲ್ ಚೊಕ್ಸಿ ಕೆರಿಬಿಯನ್ ದ್ವೀಪ ಪ್ರದೇಶದಲ್ಲಿ ಇರುವ ಬಗ್ಗೆ ಮಾಹಿತಿ ಬಂದಿದ್ದು, ಆತನನ್ನು ಬಂಧಿಸುವಂತೆ ಭಾರತ , ಅಂಟಿಗುವಾ ಹಾಗೂ ಬರ್ಬುಡಾ ರಾಷ್ಟ್ರಗಳನ್ನು ಕೋರಿದೆ.

ಭಾರತ ದ್ವೀಪರಾಷ್ಟ್ರದ ಸಂಪರ್ಕದಲ್ಲಿದ್ದು, ಚೋಕ್ಸಿ ಅಲ್ಲಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ.  ಆತನ ಅಲ್ಲಿಂದ ಎಲ್ಲಿಯೂ  ಹೋಗದಂತೆ ಕ್ರಮ ಕೈಗೊಳ್ಳಬೇಕು, ವಾಯು ಮತ್ತು ಸಮುದ್ರ ಮಾರ್ಗದಲ್ಲಿ ನಿರ್ಬಂಧ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ

ಮೆಹುಲ್ ಚೋಕ್ಸಿ ಅಂಟಿಗುವಾದಲ್ಲಿರುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ಪಡೆದ  ಕೂಡಲೇ ಜಾರ್ಜ್ ಟೌನ್ ನಲ್ಲಿರುವ ಹೈ ಕಮಿಷನ್ ಅಧಿಕಾರಿಗಳು  ಅಂಟಿಗುವಾ ಮತ್ತು ಬರ್ಬುಡಾ  ಸರ್ಕಾರಗಳಿಗೆ ಎಚ್ಚರಿಸಿದ್ದಾರೆ. ಆತ ವಾಯು ಹಾಗೂ ಸಮುದ್ರದ ಮಾರ್ಗದ ಮೂಲಕ ಅಲ್ಲಿಂದ ಬೇರೆಡೆಗೆ ತೆರಳದಂತೆ ಕ್ರಮ ಕೈಗೊಂಡು ಬಂಧಿಸುವಂತೆ  ಸೂಚಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕೆರಿಬಿಯನ್ ರಾಷ್ಟ್ರ ನೀಡುವ ಪಾಸ್ ಪೋರ್ಟ್ ನಿಂಂಂದ 132 ರಾಷ್ಟ್ರಗಳಿಗೆ  ಸಂಚರಿಸಬಹುದಾಗಿದ್ದು, ಕಳೆದ ವರ್ಷ ಅಂಟಿಗುವಾ ನಾಗರಿಕತ್ವ ಪಡೆದುಕೊಂಡಿದ್ದ ಚೋಕ್ಸಿ  ವ್ಯವಹಾರದ ನಿಟ್ಟಿನಲ್ಲಿ ಪಾಸ್ ಪೋರ್ಟ್ ಅವಧಿಯನ್ನು ವಿಸ್ತರಿಸಿಕೊಂಡಿದ್ದ .

ಹೈಕಮೀಷನರ್ ಅಧಿಕಾರಿಗಳು  ಅಂಟಿಗುವಾ ಹಾಗೂ ಬರ್ಬುಡಾ ಅಧಿಕಾರಿಗಳೊಂದಿಗೆ ಇಂದು ಮಾತುಕತೆ ನಡೆಸಲಿದ್ದಾರೆ. ಈ ವಿಚಾರದಲ್ಲಿ ಆ ದೇಶಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ  ವಿದೇಶಾಂಗ ಇಲಾಖೆ ವ್ಯವಹಾರಗಳ ಸಚಿವಾಲಯ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13.400 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಹಾಗೂ ಮೆಹುಲ್ ಚೊಕ್ಸಿ ವಿರುದ್ಧ  ಜಾರಿನಿರ್ದೇಶನಾಲಯ ಹಾಗೂ ಸಿಬಿಐ ತನಿಖೆ ನಡೆಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com