ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ನಲ್ಲಿ ಲವ್ ಫಾರ್ ನೇಬರ್ಸ್ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ ಅಸ್ಸಾಂ ನಲ್ಲಿ ಏನು ನಡೆಯುತ್ತಿದೆ? ಎನ್ ಆರ್ ಸಿ ಸಮಸ್ಯೆ ಕೇವಲ ಬಂಗಾಳಿಗಳಿಗೆ ಮಾತ್ರವಲ್ಲ, ಅಲ್ಪಸಂಖ್ಯಾತರು, ಹಿಂದೂಗಳು, ಬಂಗಾಳಿಗಳು, ಬಿಹಾರಿಗಳಿಗೂ ಸಮಸ್ಯೆಯಾಗಿದೆ. ನೆನ್ನೆ ಅಧಿಕಾರದಲ್ಲಿದ್ದ ಪಕ್ಷಕ್ಕೆ ಮತ ಚಲಾವಣೆ ಮಾಡಿದ್ದವರನ್ನು ಏಕಾಏಕಿ ಅವರದ್ದೇ ದೇಶದಲ್ಲಿ ನಿರಾಶ್ರಿತರನ್ನಾಗಿ ಮಾಡಲಾಗುತ್ತಿದೆ. ನನ್ನ ಮಾತೃಭೂಮಿಯನ್ನು ವಿಶ್ವಾಸವೇ ಇಲ್ಲದ ದೇಶವನ್ನಾಗಿ ನೋಡುವುದಕ್ಕೆ ಸಾಧ್ಯವಿಲ್ಲ, ನನ್ನ ದೇಶ ಒಡೆಯುವುದನ್ನು ನೋಡಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.