ಸಾಮಾಜಿಕ ಜಾಲತಾಣಗಳನ್ನೂ ಅನುಚಿತವಾಗಿ ಚಿತ್ರಿಸುವ ವಿರುದ್ಧದ ಕಾನೂನಿನ ಅಡಿಯಲ್ಲಿ ತರುವುದಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ಜಾಹಿರಾತು, ಮುದ್ರಣ, ಬರವಣಿಗೆ, ಚಿತ್ರ ಸೇರಿದಂತೆ ಯಾವುದೇ ರೀತಿಯಲ್ಲೂ ಮಹಿಳೆಯರನ್ನು ಅನುಚಿತವಾಗಿ ಚಿತ್ರಿಸುವುದರ ವಿರುದ್ಧದ ಕಾನೂನು ಶೀಘ್ರವೇ ವಾಟ್ಸ್ ಆಪ್, ಸ್ನ್ಯಾಪ್ ಚಾಟ್, ಇನ್ಸ್ಟಾಗ್ರಾಮ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಿಗೂ ಅನ್ವಯವಾಗಲಿದೆ.