ನಾಗಾ ಮುಖಂಡನ ಮನೆ ಮೇಲೆ ದಾಳಿ, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ಸ್ಥಗಿತಕ್ಕೆ ನಿರ್ಧಾರ
ಜೂನ್ 2 ರಂದು ನಾಗಾ ಕಾರ್ಯನಿರತ ಗುಂಪುಗಳ ಸಹ ಸಂಚಾಲಕರ ನಿವಾಸದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಾಜಕೀಯ ವಿಷಯದ ಬಗ್ಗೆ ಕೇಂದ್ರಸರ್ಕಾರದೊಂದಿಗೆ ಮಾತುಕತೆಯನ್ನು ಸ್ಥಗಿತಗೊಳಿಸಲು ನಾಗ ರಾಷ್ಟ್ರೀಯ ರಾಜಕೀಯ ಗುಂಪುಗಳ ಕಾರ್ಯನಿರತ ಸಮಿತಿ ನಿರ್ಧರಿಸಿದೆ.
ದಿಮಾಪುರ್ : ಜೂನ್ 2 ರಂದು ನಾಗಾ ಕಾರ್ಯನಿರತ ಗುಂಪುಗಳ ಸಹ ಸಂಚಾಲಕರ ನಿವಾಸದ ಮೇಲೆ ಭದ್ರತಾ ಪಡೆಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ರಾಜಕೀಯ ವಿಷಯದ ಬಗ್ಗೆ ಕೇಂದ್ರಸರ್ಕಾರದೊಂದಿಗೆ ಮಾತುಕತೆಯನ್ನು ಸ್ಥಗಿತಗೊಳಿಸಲು ನಾಗ ರಾಷ್ಟ್ರೀಯ ರಾಜಕೀಯ ಗುಂಪುಗಳ ಕಾರ್ಯನಿರತ ಸಮಿತಿ ನಿರ್ಧರಿಸಿದೆ.
ದಿಮಾಪುರದಲ್ಲಿ ನಿನ್ನೆ ನಡೆದ ತುರ್ತು ಸಭೆಯಲ್ಲಿ ನಾಗಾ ಕಾರ್ಯನಿರತ ಗುಂಪುಗಳ ಸಮಿತಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎನ್ ಎನ್ ಪಿಜಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮಾತುಕತೆಗಳಲ್ಲಿ ನಡೆಯುತ್ತಿರುವ ಎಲ್ಲಾ ಪ್ರಗತಿ ಕೇಂದ್ರ ಸರ್ಕಾರಕ್ಕೆ ಅಲ್ಪಪ್ರಮಾಣದ ವಿಷಯವಾಗಿದ್ದು, ಸಂಭಾಷಣೆಯನ್ನು ಮುಂದುವರೆಸುವುದಕ್ಕೆ ಯಾವುದೇ ಉದ್ದೇಶವಿಲ್ಲ ಎಂಬುದನ್ನು ದಾಳಿಯು ತೋರಿಸುತ್ತದೆ ಎಂದು ಆರೋಪಿಸಲಾಗಿದೆ.