ಗುಜರಾತ್; ಭಾರತೀಯ ವಾಯುಪಡೆಯ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ಭಾರತೀಯ ವಾಯುಪಡೆಗೆ ಸೇರಿದ ಯುದ್ಧ ವಿಮಾನವೊಂದು ಗುಜರಾತ್'ನ ಕಚ್'ನಲ್ಲಿ ಪತನಗೊಂಡಿದ್ದು, ಘಟನೆಯಲ್ಲಿ ಹೆಲಿಕ್ಯಾಪ್ಟರ್ ಪೈಲಟ್ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ...
ಗುಜರಾತ್; ವಾಯುಪಡೆ ಹೆಲಿಕ್ಯಾಪ್ಟರ್ ಪತನ, ಪೈಲಟ್ ಸಾವು
ಗುಜರಾತ್; ವಾಯುಪಡೆ ಹೆಲಿಕ್ಯಾಪ್ಟರ್ ಪತನ, ಪೈಲಟ್ ಸಾವು
Updated on
ಕಚ್; ಭಾರತೀಯ ವಾಯುಪಡೆಗೆ ಸೇರಿದ ಹೆಲಿಕ್ಯಾಪ್ಟರ್ ವೊಂದು ಗುಜರಾತ್'ನ ಕಚ್'ನಲ್ಲಿ ಪತನಗೊಂಡಿದ್ದು, ಘಟನೆಯಲ್ಲಿ ಹೆಲಿಕ್ಯಾಪ್ಟರ್ ಪೈಲಟ್ ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ. 
ಕಚ್'ನ ಮುಂದ್ರಾದ ಬರೇಜಾ ಎಂಬ ಗ್ರಾಮದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಹೆಲಿಕಾಪ್ಟರ್ ಜಾಮ್ ನಗರದಿಂದ ದೈನಂದಿನ ತರಬೇತಿ ಹಾರಾಟಕ್ಕೆ ತೆರಳಿದ್ದು. ಈ ವೇಳೆ ದುರ್ಘಟನೆ ಸಂಭವಿಸಿದೆ. ಪತನಗೊಂಡಿರುವ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿರುವುದಾಗಿ ವರದಿಗಳು ತಿಳಿಸಿವೆ. 
ಅಪಘಾತದಲ್ಲಿ ಪೈಟಲ್, ಕಮಾಂಡೋ ಸಂಜಯ್ ಚೌಹಾಣ್ ಸಾವನ್ನಪ್ಪಿದ್ದಾರೆ. ವಿಮಾನಜ ಅವಶೇಷಗಳು ಹಲವಾರು ಕಿ.ಮೀಗಳ ವರೆಗೆ ಹರಡಿದೆ. ವಿಮಾನ ಅಪಘಾತದಿಂದಾಗಿ ಹಲವಾರು ಜಾನುವಾರುಗಳು ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ. 
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸುವ ಪೊಲೀಸರು ಮತ್ತು ವಾಯುಪಡೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಕುರಿತು ವಾಯುಪಡೆ ತನಿಖೆಗೆ ಆದೇಶ ನೀಡಿದೆ ಎಂದು ತಿಳಿದುಬಂದಿದೆ. 
ವಿಮಾನ ಪತನ ತೀವ್ರವಾಗಿದ್ದು, ವಿಮಾನ ಸಂಪೂರ್ಣವಾಗಿ ನಾಶಗೊಂಡಿದೆ. ವಿಮಾನವು ಭಾರತೀಯ ವಾಯುಪಡೆ ಯುದ್ಧವಿಮಾನವಾಗಿದೆ. ಜಾಗ್ವಾರ್ ಎಂಬುದು ಆಂಗ್ಲೋ-ಫ್ರೆಂಚ್ ಮೂಲದ ಅವಳಿ-ಎಂಜಿನ್ ಹೊಂದಿರುವ ವಿಮಾನವಾಗಿದೆ. ಇದರ ಗರಿಷ್ಠ ವೇಗ ಗಂಟೆಗೆ 1350 ಕಿಮೀ (ಮ್ಯಾಕ್ 1.3) ಆಗಿದೆ. ಇದು ಎರಡು 30ಎಂಎಂ ಗನ್ ಗಳನ್ನು ಹೊಂದಿದೆ ಮತ್ತು 4750 ಕೆಜಿ. ಬಾಹ್ಯ ಸಂಗ್ರಹಗಳೊಂದಿಗೆ (ಬಾಂಬ್ ಗಳು/ಇಂಧನ) ಎರಡು ಆರ್-350 ಮ್ಯಾಜಿಕ್ ಸಿಸಿಎಂ ಗಳನ್ನು (ಓವರ್ವಿಂಗ್) ಸಾಗಿಸಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com