ಅಮೆರಿಕದ ಆಕ್ಷೇಪಣೆ ಹೊರತಾಗಿಯೂ ಭಾರತ-ರಷ್ಯಾ ರಕ್ಷಣಾ ಒಪ್ಪಂದ ಅಂತಿಮ ಹಂತಕ್ಕೆ
ದೇಶ
ಅಮೆರಿಕದ ಆಕ್ಷೇಪಣೆ ಹೊರತಾಗಿಯೂ ಭಾರತ-ರಷ್ಯಾ ರಕ್ಷಣಾ ಒಪ್ಪಂದ ಅಂತಿಮ ಹಂತಕ್ಕೆ
ಅಮೆರಿಕದೊಂದಿಗಿನ ಭಾರತದ ರಕ್ಷಣಾ ಸಹಕಾರ ಸೀಮಿತಗೊಳ್ಳುವ ಸಾಧ್ಯತೆಯ ಹೊರತಾಗಿಯೂ ಭಾರತ-ರಷ್ಯಾ ನಡುವಿನ 5.5 ಬಿಲಿಯನ್ ಡಾಲರ್ ಮೊತ್ತದ ಡೀಲ್ ಅಂತಿಮ ಹಂತಕ್ಕೆ ತಲುಪಿದೆ.
ಅಮೆರಿಕದೊಂದಿಗಿನ ಭಾರತದ ರಕ್ಷಣಾ ಸಹಕಾರ ಸೀಮಿತಗೊಳ್ಳುವ ಸಾಧ್ಯತೆಯ ಹೊರತಾಗಿಯೂ ಭಾರತ-ರಷ್ಯಾ ನಡುವಿನ 5.5 ಬಿಲಿಯನ್ ಡಾಲರ್ ಮೊತ್ತದ ಡೀಲ್ ಅಂತಿಮ ಹಂತಕ್ಕೆ ತಲುಪಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಷ್ಯಾದೊಂದಿಗಿನ ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಮ್ ಖರೀದಿಸುವ ಮಹತ್ವದ ಒಪ್ಪಂದ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಒಪ್ಪಂದದಿಂದಾಗಿ ಭಾರತ-ಅಮೆರಿಕ ನಡುವಿನ ರಕ್ಷಣಾ ಸಹಕಾರಕ್ಕೂ
ಯಾವುದೇ ನಕಾರಾತ್ಮಕ ಪರಿಣಾಮ ಉಂಟಾಗುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಭಾರತ-ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಬಾಹ್ಯ ಒತ್ತಡಗಳಿಂದ ಮುಕ್ತವಾದದ್ದು ಹಾಗೂ ಪ್ರತ್ಯೇಕವಾದದ್ದು ಎಂದು ಅಮೆರಿಕಾಗೆ ಭಾರತ ಪ್ರತಿ ಹಂತದಲ್ಲೂ ಮನವರಿಕೆ ಮಾಡಿಕೊಟ್ಟಿದೆ, ರಷ್ಯಾ-ಭಾರತದ ರಕ್ಷಣಾ ಸಂಬಂಧ ಸಂದಿಗ್ಧ ಪರಿಸ್ಥಿತಿಗಳಲ್ಲಿಯೂ ಯಶಸ್ವಿಯಾಗಿ ಮುನ್ನಡೆದುಕೊಂಡುಬಂದಿರುವುದಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರಷ್ಯಾದೊಂದಿಗೆ ಯಾವುದೇ ರೀತಿಯ ರಕ್ಷಣಾ ಹಾಗೂ ಗುಪ್ತಚರ ಸಂಸ್ಥೆಗಳೊಂದಿಗೆ ವ್ಯವಹಾರದಲ್ಲಿ ತೊಡಗಿರುವ ಸಂಸ್ಥೆಗಳು ಅಥವಾ ದೇಶಗಳ ವಿರುದ್ಧ ಕ್ರಮ ಜರುಗಿಸುವುದರ ಬಗ್ಗೆ ಅಮೆರಿಕ ಕಠಿಣ ನಿಲುವು ಅನುಸರಿಸುತ್ತಿದೆ ಈ ಹಿನ್ನೆಲೆಯಲ್ಲಿ ರಷ್ಯಾದೊಂದಿಗಿನ ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಮ್ ಒಪ್ಪಂದ ಅಮೆರಿಕ-ಭಾರತ ರಕ್ಷಣಾ ಸಹಕಾರದ ಮೇಲೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದು ಎಂದು ವಿಶ್ಲೇಷಿಸಲಾಗುತ್ತಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ