ರಂಜಾನ್ ಕದನ ವಿರಾಮಕ್ಕೆ ಬದ್ಧ ಆದರೆ, ಪಾಕ್ ಅಪ್ರಚೋದಿತ ದಾಳಿ ನಡೆಸಿದರೆ ಸುಮ್ಮನೆ ಕೂರುವುದಿಲ್ಲ: ರಕ್ಷಣಾ ಸಚಿವೆ

ರಂಜಾನ್ ಕದನ ವಿರಾಮಕ್ಕೆ ಭಾರತ ಬದ್ಧವಾಗಿದೆ. ಆದರೆ, ಪಾಕಿಸ್ತಾನ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಲೇ ಇದ್ದರೆ ಖಂಡಿತವಾಗಿಯೂ ದಿಟ್ಟ ಉತ್ತರವನ್ನು ನೀಡುತ್ತೇವೆಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ...
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ರಂಜಾನ್ ಕದನ ವಿರಾಮಕ್ಕೆ ಭಾರತ ಬದ್ಧವಾಗಿದೆ. ಆದರೆ, ಪಾಕಿಸ್ತಾನ ಅಪ್ರಚೋದಿತ ದಾಳಿಗಳನ್ನು ನಡೆಸುತ್ತಲೇ ಇದ್ದರೆ ಖಂಡಿತವಾಗಿಯೂ ದಿಟ್ಟ ಉತ್ತರವನ್ನು ನೀಡುತ್ತೇವೆಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಹೇಳಿದ್ದಾರೆ. 
ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಭಾರತೀಯ ಸೇನೆಯನ್ನು ಗುರಿಯಾಗಿರಿಸಿಕೊಂಡು ಅಪ್ರಚೋದಿತ ದಾಳಿ ನಡೆಸುತ್ತಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಗಡಿಯನ್ನು ನಾವು ಸುರಕ್ಷಿತ ಮಾಡಬೇಕು. ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಉತ್ತರ ನೀಡುವಂತೆ ಈಗಾಗಲೇ ಸೇನೆಗೆ ಸೂಚನೆ ನೀಡಿದ್ದಾರೆ. ಅಪ್ರಚೋದಿತ ದಾಳಿಗೆ ಉತ್ತರ ನೀಡದೆ ಸುಮ್ಮನಿರುವುದಿಲ್ಲ ಎಂದು ಹೇಳಿದ್ದಾರೆ. 
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ರಂಜಾನ್ ಕದನ ವಿರಾಮ ಯಶಸ್ವಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿರ್ಧರಿಸುವುದರಲ್ಲಿ ನಮ್ಮ ಸಚಿವಾಲಯದ ಪಾತ್ರವಿಲ್ಲ. ಗಡಿಯಲ್ಲಿ ನಮ್ಮ ಮೇಲೆ ದಾಳಿ ನಡೆದಾಗ ಅದಕ್ಕೆ ದಿಟ್ಟ ಉತ್ತರ ನೀಡುವುದು ನಮ್ಮ ಕೆಲಸವಾಗಿರುತ್ತದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com