ಕಳೆದ 5 ತಿಂಗಳಲ್ಲಿ ರೈಲುಗಳಲ್ಲಿ 15 ಅಗ್ನಿ ಅವಘಡಗಳು; ಎಚ್ಚರಿಕೆ ಗಂಟೆ ಬಾರಿಸಿದ ರೈಲ್ವೆ ಮಂಡಳಿ

ಮೇಲ್ವಿಚಾರಣೆ ಕೊರತೆ ಮತ್ತು ರೋಲಿಂಗ್ ಸ್ಟಾಕ್ ನಿರ್ವಹಣೆಯಲ್ಲಿ ಅಸಮರ್ಪಕತೆಯಿಂದಾಗಿ ಕಳೆದ ಐದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮೇಲ್ವಿಚಾರಣೆ ಕೊರತೆ ಮತ್ತು ರೋಲಿಂಗ್ ಸ್ಟಾಕ್ ನಿರ್ವಹಣೆಯಲ್ಲಿ ಅಸಮರ್ಪಕತೆಯಿಂದಾಗಿ ಕಳೆದ ಐದು ತಿಂಗಳಲ್ಲಿ ಅಗ್ನಿ ಸಂಬಂಧಿತ 15 ಅಪಘಾತಗಳು ಸಂಭವಿಸಿದೆ ಎಂದು ರೈಲ್ವೆ ಮಂಡಳಿ ತಿಳಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲು ವಲಯ ರೈಲ್ವೆಗೆ ಪತ್ರ ಬರೆಯಲಾಗಿದೆ.

ಎಲ್ಲಾ ವಲಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ರೈಲ್ವೆ ಮಂಡಳಿ ಪತ್ರ ಬರೆದಿದ್ದು, ರೋಲಿಂಗ್ ಸ್ಟಾಕ್ ಗಳ ನಿರ್ವಹಣೆಯಲ್ಲಿ ಕೊರತೆ ಕಂಡುಬಂದಿದ್ದು ಇದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚಿಸಲಾಗಿದೆ.

ಕಳೆದ 5 ತಿಂಗಳಲ್ಲಿ 15 ಅಗ್ನಿ ದುರಂತಗಳು ರೈಲ್ವೆಯಲ್ಲಿ ಉಂಟಾಗಿದ್ದು ಇದಕ್ಕೆ ದುಷ್ಕರ್ಮಿಗಳ ಚಟುವಟಿಕೆ, ರೋಲಿಂಗ್ ಸ್ಟಾಕ್ ಗಳ ಸರಿಯಾದ ನಿರ್ವಹಣೆಯಿಲ್ಲದಿರುವುದು, ಮೇಲ್ವಿಚಾರಣೆ ಕೊರತೆ, ವಸ್ತುಗಳನ್ನು ಸರಿಯಾಗಿ ಕಾಪಾಡದಿರುವುದು, ಸಾಕಷ್ಟು ಭದ್ರತೆಯಿಲ್ಲದಿರುವುದು ಕಾರಣವಾಗಿದೆ ಎಂದು ಮೇ 31ರಂದು ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಆಗ್ರಾ ವಲಯದಲ್ಲಿ ರೈಲಿನ ಬೋಗಿಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಹತ್ತಿ ಉರಿದಿದ್ದು ಮತ್ತೊಂದು ಘಟನೆಯಲ್ಲಿ ದೆಹಲಿ ವಿಭಾಗದ ಎನ್ ಆರ್ ವಲಯದಲ್ಲಿ ವಿದ್ಯುತ್ ಚಾಲಿತ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಮೊಬೈಲ್ ಬ್ಯಾಟರಿಗಳಿಂದ ಅಗ್ನಿ ದುರಂತ ಸಂಭವಿಸಿ ಬೋಗಿಯ ಲಗ್ಗೇಜು ಭಾಗಕ್ಕೆ ಬೆಂಕಿ ಹತ್ತಿ ಉರಿಯಿತು. ಇದೇ ರೀತಿಯ ಅಗ್ನಿ ಅವಘಡ ಕೇಂದ್ರ ರೈಲ್ವೆ ಮತ್ತು ಉತ್ತರ ಮಧ್ಯ ರೈಲ್ವೇ ವಲಯದಲ್ಲಿ ಕೂಡ ಅಗ್ನಿ ಅವಘಡ ಸಂಭವಿಸಿದ್ದು ಇದಕ್ಕೆ ಸೂಕ್ತ ನಿರ್ವಹಣೆ ಕೊರತೆಯೇ ಕಾರಣವಾಗಿದೆ ಎಂದು ರೈಲ್ವೆ ಮಂಡಳಿ ತನ್ನ ಪತ್ರದಲ್ಲಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com