ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನ ಸರ್ವೆಂಟ್ ಕ್ವಾರ್ಟರ್ಸ್ ನಲ್ಲಿ ವ್ಯಕ್ತಿಯ ದೇಹ ಪತ್ತೆಯಾಗಿದೆ ಎಂದು ಪೋಲೀಸರು ಹೇಳಿದ್ದಾರೆ.
ವ್ಯಕ್ತಿಯು ನಾಲ್ಕನೇ ವರ್ಗದ ನೌಕರರಾಗಿದ್ದು ಅವನು ರಾಷ್ಟ್ರಪತಿಯ ಸೆಕ್ರಟೆರಿಯಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಇವರು ಕೆಲ ಸಮಯದಿಂದ ಅಸ್ವಸ್ಥರಾಗಿದ್ದರು ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಗುರುವಾರದಂದು ಸರ್ವೆಂಟ್ ಕ್ವಾರ್ಟರ್ಸ್ ನಿಂದ ಕೆಟ್ಟ ವಾಸನೆ ಬಂದ ಕಾರಣ ನೆರೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ವ್ಯಕ್ತಿ ಒಳಗಿನಿಂಡಲೇ ಕೊಠಡಿಯನ್ನು ಲಾಕ್ ಮಾಡಿಕೊಂಡಿದ್ದ. ಸಧ್ಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದ್ದು ಸಾವಿನ ಹಿಂದೆ ಯಾರ ಕೈವಾಡವಿರುವ ಬಗ್ಗೆ ಪತ್ತೆಯಾಗಿಲ್ಲ.
ವ್ಯಕ್ತಿಯ ದೇಹವು ಎರಡು ಅಥವಾ ಮೂರು ದಿನಗಳಿಂದ ಅದೇ ಕೊಠಡಿಯಲ್ಲಿ ಇದ್ದು ಅವರ ಕುಟುಂಬದವರು ಪ್ರ ಊರಿಗೆ ತೆರಳಿರಬೇಕೆಂದು ಪೋಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.