ಮೋದಿ ಸರಕಾರ ಮುಸ್ಲಿಮರನ್ನು ಗೆಲ್ಲಲು ಹೆಚ್ಚೆಚ್ಚು ಅಭಿವೃದ್ಧಿ ಮಾಡಬೇಕು: ಕೇಂದ್ರ ಸಚಿವ
ಕಳೆದ 70 ವರ್ಷಗಳಿಂದ ಮುಸ್ಲಿಂರ ಮನಸ್ಸು ವಿಷಪೂರಿತವಾಗಿದ್ದು, ಅವರ ವಿಶ್ವಾಸವನ್ನು ಪಡೆಯಲು ಮೋದಿ ಸರ್ಕಾರ ಹೆಚ್ಚು ಹೆಚ್ಚು ಅಭಿವೃದ್ದಿಪರ ಕೆಲಸಗಳನ್ನು ಮಾಡಬೇಕಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವೀ ಹೇಳಿದ್ದಾರೆ.
ನವದೆಹಲಿ: ಕಳೆದ 70 ವರ್ಷಗಳಿಂದ ಮುಸ್ಲಿಂರ ಮನಸ್ಸು ವಿಷಪೂರಿತವಾಗಿದ್ದು, ಅವರ ವಿಶ್ವಾಸವನ್ನು ಪಡೆಯಲು ಮೋದಿ ಸರ್ಕಾರ ಹೆಚ್ಚು ಹೆಚ್ಚು ಅಭಿವೃದ್ದಿಪರ ಕೆಲಸಗಳನ್ನು ಮಾಡಬೇಕಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವೀ ಹೇಳಿದ್ದಾರೆ.
ಮುಸ್ಲಿಂ ಅಭಿವೃದ್ದಿಯನ್ನು ಮನದಲ್ಲಿಟ್ಟುಕೊಂಡು ಮೋದಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. 2019 ರ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ತ್ರಿವಳಿ ತಲಾಖ್ ನಿಷೇಧ ಕುರಿತು 'ಟ್ರಿಪಲ್ ಮಾಡಿದ ಪ್ರಯತ್ನಗಳನ್ನು ತಿಳಿಸಲಾಗುವುದು ಎಂದಿದ್ದಾರೆ.
ಮುಸ್ಲಿಂ ಮಹಿಳೆಯರಿಗಾಗಿ ಸಚಿವರು ಇತ್ತೀಚಿಗೆ ಆಯೋಜಿಸಿದ್ದ ಇಪ್ತಾರ್ ಕೂಟದಲ್ಲಿ ತ್ರಿವಳಿ ತಲಾಖ್ ನಿಂದ ನೊಂದ ಕೆಲ ಸಂತ್ರಸ್ತರು ಭಾಗವಹಿಸಿದ್ದರು. ಯುವ ಜನಾಂಗ ಅದರಲ್ಲೂ ಮಹಿಳೆಯರು ಬಿಜೆಪಿ ಸರ್ಕಾರದ ಗುಣಗಳು ಹಾಗೂ ಅವಗುಣಗಳ ಬಗ್ಗೆ ಪರಿಶೀಲನೆ ನಡೆಸುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ಹೇಳಿಕೆ ನೀಡಿದ್ದಾರೆ.