ಚೀನಾ ರಾಯಭಾರಿ ಲುವೋ ಝಹೂಯಿ
ಚೀನಾ ರಾಯಭಾರಿ ಲುವೋ ಝಹೂಯಿ

ಭಾರತ, ಚೀನಾ ಸಂಬಂಧಕ್ಕೆ ಮತ್ತೊಂದು ಡೋಕ್ಲಾಮ್ ಅಡ್ಡಿಯಾಗಬಾರದು: ಚೀನಾ ರಾಯಭಾರಿ ಲುವೋ ಝಹೂಯಿ

ಭಾರತ, ಚೀನಾ ಸಂಬಂಧಕ್ಕೆ ಮತ್ತೊಂದು ಡೋಕ್ಲಾಮ್ ಅಡ್ಡಿಯಾಗಬಾರದು ಚೀನಾ ರಾಯಭಾರಿ ಲುವೋ ಝಹೂಯಿ ಹೇಳಿದ್ದಾರೆ
Published on
ನವದೆಹಲಿ: ಭಾರತ, ಚೀನಾ ಸಂಬಂಧಕ್ಕೆ ಮತ್ತೊಂದು ಡೋಕ್ಲಾಮ್ ಅಡ್ಡಿಯಾಗಬಾರದು ಎಂದಿರುವ  ಚೀನಾ ರಾಯಭಾರಿ ಲುವೋ ಝಹೂಯಿ ,ವಿಶೇಷ ಪ್ರತಿನಿಧಿಗಳ ಸಭೆಯ ಮೂಲಕ ಗಡಿ ವಿಚಾರದಲ್ಲಿ "ಪರಸ್ಪರ ಸ್ವೀಕಾರಾರ್ಹ ಪರಿಹಾರ" ವನ್ನು ಕಂಡುಹಿಡಿಯುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಚೀನಾ ರಾಯಬಾರಿ ಕಚೇರಿಯಿಂದ  ಭಾರತ- ಚೀನಾ ಸಂಬಂಧ ಕುರಿತು ಆಯೋಜಿಸಿದ್ದ 'ಸಂವಾದ  ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ, ಚೀನಾ ಮತ್ತು ಪಾಕಿಸ್ತಾನವನ್ನು ಒಳಗೊಂಡ ಒಂದು ತ್ರಿಪಕ್ಷೀಯ ಶೃಂಗಸಭೆ ಅತ್ಯಂತ ರಚನಾತ್ಮಕ" ಕಲ್ಪನೆ ಎಂದು ಕೆಲವು ಭಾರತೀಯ ಸ್ನೇಹಿತರು ತಿಳಿಸಿದ್ದಾರೆ ಎಂದರು.
ಸಿನೊ-ಇಂಡಿಯನ್  ಒಪ್ಪಂದದಲ್ಲಿ  ಕೆಲ ಭಿನ್ನಾಭಿಪ್ರಾಯ ಸ್ವಾಭಾವಿಕ . ಆದರೆ.  ಸಹಕಾರದಿಂದ ಅವುಗಳನ್ನು ನಿಯಂತ್ರಿಸಬೇಕು ಮತ್ತು ನಿರ್ವಹಿಸಬೇಕು, ಸಹಕಾರ ವಿಸ್ತರಣೆ ಮೂಲಕ ಭಿನ್ನಾಭಿಪ್ರಾಯಗಳನ್ನು ನಿಯಂತ್ರಿಸುವ ಅಗತ್ಯವಿದೆ  ಎಂದು ಹೇಳಿದರು.
ಕಳೆದ ವರ್ಷ ಜೂನ್ ನಿಂದ ಆಗಸ್ಟ್ ವರೆಗೂ  ಚೀನಾ, ಭಾರತ ಹಾಗೂ ಭೂತಾನ್ ಗಡಿಕ್ಕೆ ಹೊಂದಿಕೊಂಡಿರುವ   ಡೊಕ್ಲಾಮ್ ನಲ್ಲಿ 73 ದಿನ  ಭಾರತ ಹಾಗೂ ಚೀನಾ ಪಡೆಗಳನ್ನು ನಿಯೋಜಿಸಲಾಗಿತ್ತು.
ನಾತೂಲಾ  ಕಡೆಯಿಂದ ಕೈಲಾಸ ಮಾನಸ ಸರೋವರ ಹಾಗೂ ಉಭಯ ರಾಷ್ಟ್ರಗಳ ಸೈನಿಕ ತಾಲೀಮು  ಸ್ಥಗಿತದ ನಂತರ  ಅಲ್ಲಿ ನಿಯೋಜಿಸಲಾಗಿದ್ದ ಉಭಯ ದೇಶಗಳ ಸೈನಿಕರನ್ನು ಹಿಂತೆಗೆದುಕೊಳ್ಳಲಾಗಿತ್ತು.ಚೀನಾ ಟಿಬೆಟ್ ನಲ್ಲಿ  ಹುಟ್ಟುವ  ಬ್ರಹ್ಮಪುತ್ರ ಮತ್ತು ಸಿಂಧೂ ನದಿಗಳ  ಮಾಹಿತಿಯನ್ನು ಚೀನಾ ನೀಡಿರಲಿಲ್ಲ.
ಧಾರ್ಮಿಕ ವಿನಿಮಯವನ್ನು ಚೀನಾ ಯಾವಾಗಲೂ ಪ್ರೋತ್ಸಾಹಿಸುತ್ತದೆ ಮತ್ತು ಟಿಬೆಟ್ ನಲ್ಲಿರುವ ಕೈಲಾಸ ಮಾನಸ ಸರೋವರಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಚೀನಾ ರಾಯಬಾರಿ ಹೇಳಿದರು.
ಈ ವರ್ಷ ವೂಹಾನ್ ಮತ್ತು ಕ್ವಿಂಗ್ಡಾವೊದಲ್ಲಿ ಕಳೆದೆರಡು ತಿಂಗಳಲ್ಲಿ ಎರಡು ಬಾರಿ ಭೇಟಿಯಾಗಿರುವ ಪ್ರಧಾನಿ ನರೇಂದ್ರಮೋದಿ ಹಾಗೂ  ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್  ಬ್ರಿಕ್ಸ್ ಶೃಂಗಸಭೆ ಮತ್ತು ಜಿ 20 ಶೃಂಗಸಭೆಯ ಕಡೆಗೆ ಭೇಟಿ ನೀಡುವ ಸಾಧ್ಯತೆಗಳಿವೆ ಎಂದು ಲುವೋ ಹೇಳಿದರು.
ಭದ್ರತಾ ಸಹಕಾರ  ಶಾಂಘೈ ಸಹಕಾರ ಸಂಘಟನೆಯ 8 ರಾಷ್ಟ್ರಗಳ ಪೈಕಿ  ಭಾರತ  , ಚೀನಾ, ಪಾಕಿಸ್ತಾನ  ಮೂರು ಆಧಾರಸ್ತಂಭಗಳಾಗಿವೆ. ಭಾರತ, ಚೀನಾ ಮತ್ತು ಪಾಕಿಸ್ತಾನ ಒಳಗೊಂಡ ತ್ರಿಪಕ್ಷೀಯ ಸಭೆ ಬಹಳ ರಚನಾತ್ಮಕ ಕ್ರಮವಾಗಿದೆ. ಚೀನಾ, ರಷ್ಯಾ ಮತ್ತು ಮಂಗೋಲಿಯಾ ನಾಯಕರು ಇದೇ ರೀತಿಯ ಸಭೆಯನ್ನು ಹೊಂದಿದ್ದಾರೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com