ಹುತಾತ್ಮ ವೀರ ಯೋಧ ಔರಂಗಜೇಬ್ ಮನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ

ಉಗ್ರರಿಂದ ಅಪಹರಿಸ್ಪಟ್ಟು ಹತ್ಯೆಗೀಡಾಗಿದ್ದ ಭಾರತೀಯ ಸೇನಾಪಡೆಯ ಸಿಪಾಯಿ ಔರಂಗಜೇಬ್ ಅವರ ನಿವಾರಕ್ಕೆ ಬುಧವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ...
ಹುತಾತ್ಮ ವೀರ ಯೋಧ ಔರಂಗಜೇಬ್ ಮನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಹುತಾತ್ಮ ವೀರ ಯೋಧ ಔರಂಗಜೇಬ್ ಮನೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ
ಶ್ರೀನಗರ: ಉಗ್ರರಿಂದ ಅಪಹರಿಸ್ಪಟ್ಟು ಹತ್ಯೆಗೀಡಾಗಿದ್ದ ಭಾರತೀಯ ಸೇನಾಪಡೆಯ ಸಿಪಾಯಿ ಔರಂಗಜೇಬ್ ಅವರ ನಿವಾರಕ್ಕೆ ಬುಧವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭೇಟಿ ನೀಡಿದ್ದು, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಜಮ್ಮು ಮತ್ತು ಕಾಶಾಮೀರದ ಪೂಂಜ್ ಜಿಲ್ಲೆಯ ಸಲನಿ ಗ್ರಾಮದಲ್ಲಿ ಹುತಾತ್ಮ ಯೋಧ ಔರಂಗಜೇಬ್ ಅವರ ಮನೆಯಿದ್ದು, ಅಲ್ಲಿಗೆ ತೆರಳಿದ ಸೀತಾರಾಮನ್ ಅವರು ದುಃಖತಪ್ತ ಯೋಧನ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದ್ದಾರೆ. 
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುತಾತ್ಮ ಯೋಧನ ಕುಟುಂಬಸ್ಥರನ್ನು ಭೇಟಿ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಕೆಲ ಸಮಯವನ್ನು ಅವರೊಂದಿಗೆ ಕಳೆದ. ಇಲ್ಲಿ ಯೋಧರ ಕುಟುಂಬಗಳಿದ್ದು, ಹುತಾತ್ಮ ಯೋಧರ ಕುಟುಂಬ ಸದಸ್ಯರಿದ್ದಾರೆ. ಇವರ ದೇಶಕ್ಕೆ ಸ್ಫೂರ್ತಿಯಾಗಿದ್ದಾರೆಂಬ ಸಂದೇಶವನ್ನು ಹೇಳಲು ಬಯಸುತ್ತೇನೆಂದು ಹೇಳಿದ್ದಾರೆ. 
ಹುತಾತ್ಮ ಯೋಧ ಔರಂಗಬೇಬ್ ಕುಟುಂಬ ಸದಸ್ಯರ ಭೇಟಿ ಬಳಿಕ ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿ ಕುರಿತಂತೆ ರಕ್ಷಣಾ ಸಚಿವೆ ಪರಿಶೀಲನೆ ನಡೆಸಲಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವ್ ಅವರು ಔರಂಗಜೇಬ್ ನಿವಾಸಕ್ಕೆ ಭೇಟಿ ನೀಡಿ, ಅವರ ತಂದೆ ಹಾಗೂ ಸಹೋದರನೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ವೀರ ಯೋಧನ ತ್ಯಾಗ ಎಂದಿಗೂ ವ್ಯರ್ಥವಾಗದು ಎಂದು ಭರವಸೆ ನೀಡಿದ್ದರು. 
ಜೂನ್ 14 ರಂದು ವೀರ ಯೋಧ ಔರಂಗಜೇಬ್ ಅವರನ್ನು ಅಪಹರಣ ಮಾಡಿದ್ದ ಉಗ್ರರು, ಅವರನ್ನು ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com