ಮಹಾರಾಷ್ಟ್ರದ ಬಳಿಕ ದೆಹಲಿಯತ್ತ ರೈತರ ಮಾಹಾಯಾತ್ರೆ: ಅಖಿಲ ಭಾರತ ಕಿಸಾನ್ ಸಭಾ ಚಿಂತನೆ

ಮಹಾರಾಷ್ಟ್ರ ರೈತರು ನಾಸಿಕ್ ನಿಂದ ಮುಂಬೈವರೆಗೆ ನಡೆಸಿದ್ದ ಯಶಸ್ವಿ ಪಾದಯಾತ್ರೆಯ ಬಳಿಕ ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) ಈಗ ರಾಷ್ಟ್ರ........
ಮಹಾರಾಷ್ಟ್ರದ ಬಳಿಕ ದೆಹಲಿಯತ್ತ ರೈತರ ಮಾಹಾಯಾತ್ರೆ ನಡೆಸಲು ಅಖಿಲ ಭಾರತ ಕಿಸಾನ್ ಸಭಾ ಚಿಂತನೆ
ಮಹಾರಾಷ್ಟ್ರದ ಬಳಿಕ ದೆಹಲಿಯತ್ತ ರೈತರ ಮಾಹಾಯಾತ್ರೆ ನಡೆಸಲು ಅಖಿಲ ಭಾರತ ಕಿಸಾನ್ ಸಭಾ ಚಿಂತನೆ
Updated on: 
ನವದೆಹಲಿ: ಮಹಾರಾಷ್ಟ್ರ ರೈತರು ನಾಸಿಕ್ ನಿಂದ ಮುಂಬೈವರೆಗೆ ನಡೆಸಿದ್ದ ಯಶಸ್ವಿ ಪಾದಯಾತ್ರೆಯ ಬಳಿಕ ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) ಈಗ ರಾಷ್ಟ್ರ ರಾಜಧಾನಿಯತ್ತ ಇದೇ ಬಗೆಯ ರೈತರ ರ್ಯಾಲಿ ನಡೆಸಲು ಯೋಜಿಸಿದೆ.
ಎಐಕೆಎಸ್ ಕೇಂದ್ರ ಕಛೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ರೈತರ  ಸಮಸ್ಯೆಗಳ ಬಗೆಗೆ ಸರ್ಕಾರದ ಗಮನ ಸೆಳೆಯಲು ಇಂತಹಾ ಒಂದು ರ್ಯಾಲಿಯ ಅಗತ್ಯವಿದೆ ಎಂಬ ಆಭಿಪ್ರಾಯ ವ್ಯಕ್ತವಾಗಿದೆ.
"ದೇಶದಲ್ಲಿನ ಕೃಷಿಯ ಸಂಬಂಧಿತ ಗಂಭೀರ ಬಿಕ್ಕಟ್ಟನ್ನು ಚರ್ಚೆ ನಡೆಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಬೇಕೆಂದು ಆಗ್ರಹಿಸಿ ದೆಹಲಿಗೆ ರೈತರ ಮಹಾಯಾತ್ರೆಯನ್ನು ಆಯೋಜನೆ ಮಾಡಲು ಎಐಕೆಎಸ್ ಸಭೆಯಲ್ಲಿ ನಿರ್ಧರಿಸಲಾಗಿದೆ" ಎಐಕೆಎಸ್ ಪ್ರಧಾನ ಕಾರ್ಯದರ್ಶಿ ಹನ್ನಾನ್ ಮೊಲ್ಲಾ ಪಿಟಿಐ ಗೆ ತಿಳಿಸಿದರು.
ಇತರೆ ಸಂಘಟನೆಗಳು, ಪ್ರಮುಖ ವ್ಯಕ್ತಿಗಳೊಡನೆ ಮಾತುಕತೆ ನಡೆಸಿದ ಬಳಿಕ ಮಹಾ ಪಾದಯಾತ್ರೆಯ ದಿನಾಂಕ ಅಂತಿಮಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಸೆಪ್ಟೆಂಬರ್ 5ರ ನಂತರ ಯಾವುದೇ ದಿನದಂದು ಈ ರ್ಯಾಲಿ ಆಯೋಜನೆಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.
ರೈತರ ಈ ಮಹಾ ಪಾದಯಾತ್ರೆಯನ್ನು ರೈತರು ಎದುರಿಸುತ್ತಿರುವ ಸಂಕಷ್ಟಗಳು, ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸಬಲ್ಲ ಪ್ರಗತಿಪರ, ಪ್ರಜಾಪ್ರಭುತ್ವವಾದಿತ್ಯತೀತ ಸಂಘಟನೆಗಳ ಮತ್ತು ವ್ಯಕ್ತಿಗಳು ಬೆಂಬಲಿಸಬೇಕೆಂದುಎಐಕೆಎಸ್ ಮನವಿ ಮಾಡಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಎನ್ ಡಿಎ ಸರ್ಕಾರವು ಭಾರತದಲ್ಲಿ ಕಾರ್ಪೋರೆಟ್ ಪರ ಆಡಳಿತ ನಡೆಸುತ್ತಿದ್ದು ಇದು ರೈತ ವಿರೋಧಿ, ಕಾರ್ಮಿಕ ವಿರೋಧಿಯಾಗಿದೆ ಎಂದು ಕಿಸಾನ್ ಸಂಘಟನೆ ಆರೋಪಿಸಿದೆ. ಲಕ್ಷಾಂತರ ರೈತರು ಸಾಲದ ಶೂಲದಲ್ಲಿ ಸಿಕ್ಕಿದ್ದಾರೆ, ಹಸಿವು, ಗ್ರಾಮೀಣ ನಿರುದ್ಯೋಗ ಸಮಸ್ಯೆ ಬಿಗಡಾಯಿಸಿದೆ. ಕೃಷಿ ಭೂಮಿಯ ಕೊರತೆ, ಬೆಳೆಗೆ ಸರಿಯಾದ ಬೆಲೆ ಸಿಗದಿರುವಿಕೆ ಸೇರಿ ಅನೇಕ ಸಮಸ್ಯೆಗಳಿಂದ ಹಲವು ರೈತ ಕುಟುಂಬಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com