ಸಂಗ್ರಹ ಚಿತ್ರ
ದೇಶ
ಗುಜರಾತ್: ದಲಿತನ ಹೇರ್ ಕಟ್ ಮಾಡಿದ ಕ್ಷೌರಿಕನಿಗೆ ಮೇಲ್ಜಾತಿ ಯುವಕರಿಂದ ಥಳಿತ
ದಲಿತನಿಗೆ ಹೇಕ್ ಕಟ್ ಮಾಡಿದ ಎಂಬ ಕಾರಣಕ್ಕೆ ಕ್ಷೌರಿಕನಿಗೆ ಮೇಲ್ಜಾತಿಗೆ ಸೇರಿದ ನಾಲ್ವರು ಥಳಿಸಿದ್ದು ಈ ಸಂಬಂಧ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ...
ಮೆಹ್ಸಾನಾ(ಗುಜರಾತ್): ದಲಿತನಿಗೆ ಹೇಕ್ ಕಟ್ ಮಾಡಿದ ಎಂಬ ಕಾರಣಕ್ಕೆ ಕ್ಷೌರಿಕನಿಗೆ ಮೇಲ್ಜಾತಿಗೆ ಸೇರಿದ ನಾಲ್ವರು ಥಳಿಸಿದ್ದು ಈ ಸಂಬಂಧ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೆಹ್ಸಾನಾ ಜಿಲ್ಲೆಯ ಸಟ್ಲಸ್ನಾ ತಾಲೂಕಿನ ಉಮ್ರಿಚಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಸಿಬೆನ್ ಎಂಬುವರು ಗ್ರಾಮದಲ್ಲಿ ನನ್ನ ಮಗ ಜಿಗಾರ್ ಕಟಿಂಗ್ ಶಾ ನಡೆಸುತ್ತಿದ್ದು ದಲಿತನ ಹೇರ್ ಕಟ್ ಮಾಡಿದ್ದಾನೆ ಎಂದು ನಾಲ್ವರು ಮೇಲ್ಜಾತಿಗೆ ಸೇರಿದ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿದ್ದಾರೆ.
ಜಿಗರ್ ಗೆ ಮೊದಲಿಗೆ ನಾಲ್ವರು ಯುವಕರು ದಲಿತರಿಗೆ ನಿನ್ನ ಶಾಪ್ ನಲ್ಲಿ ಹೇರ್ ಕಟ್ ಮಾಡಬೇಡ ಎಂದು ಬೆದರಿಕೆ ಹಾಕಿದ್ದರು. ಇದಕ್ಕೆ ಜಿಗರ್ ತಲೆಗೆ ಹಾಕಿಕೊಂಡಿರಲಿಲ್ಲ. ಹೀಗಾಗಿ ಗೋವಿಂದಾ ಚೌಧರಿ, ನಂಜಿ ಚೌಧರಿ, ರಾಜೇಶ್ ಚೌಧರಿ ಮತ್ತ ವಂಸತ್ ಚೌಧರಿ ಎಂಬುವರು ಜಿಗರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ರಾಟಿಲಾಲ್ ಮಕ್ವಾನಾ ಹೇಳಿದ್ದಾರೆ.
ಉಮ್ರೆಚ್ ಗ್ರಾಮದಲ್ಲಿ 1800 ಮಂದಿ ವಾಸವಾಗಿದ್ದಾರೆ. ಗ್ರಾಮದಲ್ಲಿ 40 ರಿಂದ 50 ದಲಿತರ ಮನೆಗಳಿದ್ದು ಇಲ್ಲಿಯವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿರಲಿಲ್ಲ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ