ಕರ್ನೂಲ್ : ನೆರೆಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಕೊಯ್ಲಾಕುಂಟ್ಲ ಪಟ್ಟಣದ ಕುಡುಕನೊಬ್ಬ ಪತ್ನಿ, ಐವರು ಮಕ್ಕಳು ಸೇರಿದಂತೆ 6.5 ಲಕ್ಷ ರೂಪಾಯಿಗೆ ಇಡೀ ಕುಟುಂಬವನ್ನೇ ಮಾರಾಟ ಮಾಡಿದ್ದಾನೆ.
ಈತನ ಪತ್ನಿ ವೆಂಕಟಮ್ಮ ನಾಂದ್ಯಾಲ್ ನಲ್ಲಿ ಜಿಲ್ಲಾ ಮಕ್ಕಳ ಅಭಿವೃದ್ದಿ ಮತ್ತು ರಕ್ಷಣಾ ತಂಡದ ಅಧಿಕಾರಿಗಳನ್ನು ನಿನ್ನೆ ಸಂಪರ್ಕಿಸಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ.
ಗಂಡನ ಕಿರುಕುಳ ಸಹಿಸಲು ಆಗದಿದ್ದಾಗ ವೆಂಕಟ್ಟಮ್ಮ ತನ್ನ ಮಕ್ಕಳೊಂದಿಗೆ ನಾಂದ್ಯಾಲ್ ನಲ್ಲಿರುವ ಪೋಷಕರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಳಿಕ ಒಂದು ತಿಂಗಳ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆಗ ತನ್ನ ಹೆಣ್ಣುಮಕ್ಕಳಿಗೆ ಅಲ್ಲಾಗಡದಲ್ಲಿರುವ ಜಯ್ ಮನೆಗೆ ಸೇರಿಸಿಕೊಳ್ಳುವಂತೆ ಜಿಲ್ಲಾ ಮಕ್ಕಳ ಅಭಿವೃದ್ದಿ ಹಾಗೂ ರಕ್ಷಣಾ ಅಧಿಕಾರಿಗಳನ್ನು ವೆಂಕಟಮ್ಮ ಮನವಿ ಮಾಡಿಕೊಂಡಿದ್ದಾರೆ.