ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಅಮೆರಿಕ ಬೆಂಬಲ: ನಿಕ್ಕಿ ಹ್ಯಾಲೆ

ಭಾರತ ಪರಮಾಣು ಪೂರೈಕೆದಾರ ಸಮೂಹ(ಎನ್ ಎಸ್ ಜಿ) ಸೇರುವುದಕ್ಕೆ ಅಮೆರಿಕ ಬೆಂಬಲಿಸಿದೆ ಎಂದು ವಿಶ್ವಸಂಸ್ಥೆಯ...
ನಿಕ್ಕಿ ಹ್ಯಾಲೆ
ನಿಕ್ಕಿ ಹ್ಯಾಲೆ
ನವದೆಹಲಿ: ಭಾರತ ಪರಮಾಣು ಪೂರೈಕೆದಾರ ಸಮೂಹ(ಎನ್ ಎಸ್ ಜಿ) ಸೇರುವುದಕ್ಕೆ ಅಮೆರಿಕ ಬೆಂಬಲಿಸಿದೆ ಎಂದು ವಿಶ್ವಸಂಸ್ಥೆಯ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಅವರು ಗುರುವಾರ ಹೇಳಿದ್ದಾರೆ.
ಮೂರು ದಿನಗಳ ಭಾರತ ಪ್ರವಾಸದಲ್ಲಿರುವ ಭಾರತ ಮೂಲದ ನಿಕ್ಕಿ ಹ್ಯಾಲೆ, ಭಾರತ ಸಹ ಒಂದು ಪರಮಾಣು ರಾಷ್ಟ್ರವಾಗಿದ್ದು, ಜವಾಬ್ದಾರಿಯುತ ಪ್ರಜಾಪ್ರಭುತ್ವ ಹೊಂದಿರುವುದರಿಂದ ವ್ಯಾಪಕವಾಗಿ ಗೌರವಿಸಲಾಗುತ್ತಿದೆ ಎಂದಿದ್ದಾರೆ.
ಭಾರತ ಮತ್ತು ಅಮೆರಿಕ ಎರಡೂ ರಾಷ್ಟ್ರಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇದೆ. ಸಹಿಷ್ಣುತೆ ಮತ್ತು ಗೌರವದ ವಿಚಾರದಲ್ಲಿ ಉಭಯ ರಾಷ್ಟ್ರಗಳು ಒಗ್ಗಟ್ಟಾಗಿವೆ ಎಂದು ಹ್ಯಾಲೆ ಹೇಳಿದ್ದಾರೆ.
2010ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಸಹ ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡಿದ್ದರು.
48 ಸದಸ್ಯತ್ವ ರಾಷ್ಟ್ರಗಳ ಪೈಕಿ ಬಹುತೇಕ ರಾಷ್ಟ್ರಗಳು ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಬೆಂಬಲ ನೀಡಿದ್ದವಾದರೂ ಚೀನಾ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ಎನ್ ಎಸ್ ಜಿ ಸದಸ್ಯತ್ವ ಪಡೆಯುವುದಕ್ಕೆ ಸಾಧ್ಯವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com