ಇದೇ ವೇಳೆ ಗೋರಕ್ಷಣೆ ಹೆಸರಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಕುರಿತು ಕಿಡಿಕಾರಿದ ಒವೈಸಿ, ಅಮಾಯಕರ ಮೇಲೆ ಹಲ್ಲೆ ಮಾಡಿ ಬೆದರಿಕೆ ಒಡ್ಡುವ ಮೂಲಕ ಚುನಾವಣೆ ಗೆಲ್ಲಬಹುದು ಎಂದು ಬಿಜೆಪಿ ಭಾವಿಸಿದ್ದರೆ ಅದು ಎಂದಿಗೂ ಸಾಧ್ಯವಿಲ್ಲ. ಈ ಬಗ್ಗೆ ಪ್ರಧಾನಿ ಮೋದಿ ಕೂಡ ಮೌನ ವಹಿಸಿರುವುದು ಅವರ ಕಾರ್ಯಕರ್ತರ ಕಾರ್ಯಕ್ಕೆ ಅವರು ಸಮ್ಮತಿ ನೀಡಿದಂತಾಗಿದೆ ಎಂದು ಒವೈಸಿ ಹೇಳಿದರು. ಅಂತೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಹೊರತಾಗಿ ಈ ದೇಶದಲ್ಲಿ ದೊಡ್ಡ ರಾಜಕೀಯ ಒಕ್ಕೂಟ ಉದಯವಾಗಬೇಕು. ಸ್ಥಳೀಯ ಪಕ್ಷಗಳು ಒಗ್ಗೂಡಿ, ರಾಷ್ಟ್ರೀಯ ಪಕ್ಷಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಹೇಳುವ ಮೂಲಕ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಫೆಡರಲ್ ಫ್ರಂಟ್ ಪ್ರಸ್ತಾವಕ್ಕೆ ಪರೋಕ್ಷ ಒಪ್ಪಿಗೆ ನೀಡಿದರು.