

ನವದೆಹಲಿ: ವಿಶ್ವದ 400 ಪ್ರತಿಷ್ಟಿತ ವಿಶ್ವವಿದ್ಯಾಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆರು ವಿಶ್ವವಿದ್ಯಾಲಯಗಳು ಕೂಡ ಸೇರಿಕೊಂಡಿವೆ. ಭಾರತದ ಆರು ವಿಶ್ವವಿದ್ಯಾಲಯಗಳ ಪೈಕಿಯಲ್ಲಿ 5 ವಿಶ್ವವಿದ್ಯಾಲಯಗಳು ಐಐಟಿಗಳಾಗಿವೆ ಮತ್ತು ಐಟಿಯೇತರ ವಿವಿಯೆಂದರೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಾಗಿದೆ.
ವಿವಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಐಐಟಿ-ದೆಹಲಿ ಅಗ್ರಸ್ಥಾನದಲ್ಲಿದೆ. ವಿಶ್ವದ ಪಟ್ಟಿಯಲ್ಲಿ 172ನೇ ಸ್ಥಾನದಲ್ಲಿದೆ. ಕಳೆದ ವರ್ಷ ಇದು ವಿಶ್ವದಲ್ಲಿ 185ನೇ ಸ್ಥಾನದಲ್ಲಿತ್ತು. ಐಐಟಿ-ಮುಂಬೈ(179ನೇ ಸ್ಥಾನ), ಐಐಎಸ್ಸಿ (190), ಐಐಟಿ-ಮದ್ರಾಸ್(264), ಐಐಟಿ-ಕಾನ್ಪುರ(293), ಐಐಟಿ-ಕಾರಾಗ್ಪುರ(308ನೇ ಸ್ಥಾನ)ದಲ್ಲಿವೆ.
ಭಾರತೀಯ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಟಿ-ಮುಂಬೈ ರ್ಯಾಂಕಿಂಗ್ ಪಟ್ಟಿಯಲ್ಲಿ ಅತ್ಯಂತ ಸುಧಾರಣೆಯಾಗಿದ್ದು 40 ಅಂಕಗಳ ಏರಿಕೆ ಕಂಡುಬಂದಿದೆ.
ಉದ್ಯಮ ಮತ್ತು ನಿರ್ವಹಣೆ ಶಿಕ್ಷಣದಲ್ಲಿ 9 ಭಾರತೀಯ ವಿಶ್ವವಿದ್ಯಾಲಯಗಳು ರ್ಯಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಭಾರತೀಯ ನಿರ್ವಹಣಾ ಸಂಸ್ಥೆ ಉಳಿದೆಲ್ಲಾ ಸಂಸ್ಥೆಗಳಿಗಿಂತ ಮುಂಚೂಣಿಯಲ್ಲಿದೆ.