ಆಗ್ರ: ಹಲ್ಲೆ ಆರೋಪದ ಹಿನ್ನೆಲೆಯಲ್ಲಿ ಗಾಯಕಿ ಪಾಲಾಕ್ ಮುಖಾಲ್ ಸಹೋದರ ಪಾಲಾಶ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಉತ್ತರ ಪ್ರದೇಶದ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಆಗ್ರದಲ್ಲಿ ಫೆಬ್ರವರಿಯಲ್ಲಿ ನಡೆದ ತಾಜ್ ಮಹೋತ್ಸವವನ್ನು ಆಯೋಜಿಸಿದ್ದ ಸಮಿತಿಯ ಸದಸ್ಯಯ ಮೇಲೆ ಹಲ್ಲೆ ಮಾಡಿದ ಆರೋಪ ಪಾಲಾಶ್ ಮೇಲಿದೆ. ಇನ್ನು ಪಾಲಾಶ್ ವಿರುದ್ಧ ಐಪಿಸಿ ಸೆಕ್ಷನ್ 323, 504, 506, 332, 427ರ ಅಡಿಯಲ್ಲಿ ಕೇಸ್ ದಾಖಲಿಸಲಾಗದೆ ಎಂದು ಪೊಲೀಸ್ ಅಧಿಕಾರಿ ಶೈಲೇಂದ್ರ ಸಿಂಗ್ ಹೇಳಿದ್ದಾರೆ.
ಫೆಬ್ರವರಿ 27ರಂದು ನಡೆದ ಸಮಾರಂಭದ ವೇಳೆ ಪಾಲಾಕ್ ತಾಯಿಗೆ ಸರಿಯಾಗಿ ವ್ಯವಸ್ಥೆ ಮಾಡಿಲ್ಲ ಎಂದು ಆರೋಪಿಸಿ ಪಾಲಾಶ್ ಸಮಿತಿಯ ಸದಸ್ಯ ಸುಧೀರ್ ನರೈನ್ ಮೇಲೆ ಹಲ್ಲೆ ಮಾಡಿದ್ದರು.
ಇನ್ನು ಪ್ರಕರಣ ಸಂಬಂಧ ಸಮಿತಿಯ ಸದಸ್ಯ ಸುಧೀರ್ ನರೈನ್ ಪಾಲಾಶ್ ನನಗೆ ಕಪಾಳಮೋಕ್ಷ ಹಾಗೂ ಜೀವ ಬೆದರಿಕೆ ಹಾಕಿದ್ದರು ಎಂದು ದೂರು ನೀಡಿದ್ದಾರೆ.