ತನ್ನ 3ನೇ ಅಣ್ವಸ್ತ್ರ ಸಹಿತ ಯುದ್ಧ ವಿಮಾನ ವಾಹಕ ನೌಕೆ ನಿರ್ಮಾಣ ಮಾಡುತ್ತಿರುವ ಚೀನಾ!

ಇಂಡೋ-ಫೆಸಿಫಿಕ್ ಸಮುದ್ರದ ಮೇಲೆ ಅಧಿಪತ್ಯ ಸಾಧಿಸಲು ಹವಣಿಸುತ್ತಿರುವ ಚೀನಾ ಇದೀಗ ಅದಕ್ಕೆ ನೆರವಾಗುವಂತೆ ತನ್ನ 2ನೇ ಯುದ್ಧ ವಿಮಾನ ವಾಹಕ ನೌಕೆಯನ್ನು ನಿರ್ಮಾಣ ಮಾಡಲು ಮುಂದಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೀಜಿಂಗ್: ಇಂಡೋ-ಫೆಸಿಫಿಕ್ ಸಮುದ್ರದ ಮೇಲೆ ಅಧಿಪತ್ಯ ಸಾಧಿಸಲು ಹವಣಿಸುತ್ತಿರುವ ಚೀನಾ ಇದೀಗ ಅದಕ್ಕೆ ನೆರವಾಗುವಂತೆ ತನ್ನ 2ನೇ ಯುದ್ಧ ವಿಮಾನ ವಾಹಕ ನೌಕೆಯನ್ನು ನಿರ್ಮಾಣ ಮಾಡಲು ಮುಂದಾಗಿದೆ.
ಮೂಲಗಳ ಪ್ರಕಾರ ಈಗಾಗಲೇ ಚೀನಾದ ಬಳಿ ಒಂದು ಅಣ್ವಸ್ತ್ರ ಸಹಿತ ಯುದ್ಥ ವಿಮಾನ ವಾಹಕ ನೌಕೆ ಇದ್ದು, ಇದೀಗ ಎರಡನೇ ನೌಕೆಯನ್ನು ಸಿದ್ಧಪಡಿಸಲು ಚೀನಾ ಮುಂದಾಗಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯ ಬ್ಲೂವಾಟರ್ ಫೋರ್ಸ್ ಗೆ ಬಲ ನೀಡುವ ಉದ್ದೇಶದಿಂದ ಚೀನಾ ಈ ಮಹತ್ವದ ಯೋಜನೆಗೆ ಕೈಹಾಕಿದೆ ಎಂದು ತಿಳಿದುಬಂದಿದೆ. ಅಲ್ಲದೆ ಚೀನಾಗೆ ಅಡ್ಡಿಯಾಗಿರುವ ಭಾರತವನ್ನು ಮಣಿಸಲೂ ಕೂಡ ಈ ಅಣ್ವಸ್ತ್ಪ ಸಹಿಕ ಯುದ್ಧ ವಿಮಾನ ವಾಹಕ ನೌಕೆ ನಿಯೋಜನೆ ನೆರವಾಗಲಿದೆ ಎಂದು ಚೀನಾ ನಂಬಿದೆ.
2012ರಲ್ಲಿ ಚೀನಾ ರಷ್ಯಾ ನಿರ್ಮಿತ ಅಣ್ವಸ್ತ್ರ ಸಹಿತ ಯುದ್ದ ವಿಮಾನ ವಾಹಕ ನೌಕೆಯನ್ನು ಉಕ್ರೇನ್ ನಿಂದ ಖರೀದಿ ಮಾಡಿತ್ತು. ಇದು ಚೀನಾದ ಮೊದಲ ಅಣ್ವಸ್ತ್ರ ಸಹಿತ ಯುದ್ಧ ವಿಮಾನ ವಾಹಕ ಎಂದು ಹೇಳಲಾಗಿತ್ತು. ಇದೀಗ ಅದನ್ನೂ ಮೀರಿಸುವಂತೆ ಚೀನಾ ತನ್ನದೇ ದೇಶದಲ್ಲಿ ಅತ್ಯಾಧುನಿಕ ಅಣ್ವಸ್ತ್ರ ಸಹಿತ ಯುದ್ಧ ವಿಮಾನ ವಾಹಕ ನೌಕೆಯನ್ನು ನಿರ್ಮಾಣ ಮಾಡುತ್ತಿದೆ. ಟೈಪ್ 001ಎ ಎಂಬ ಹೊಸ ಮಾದರಿಯ ಯುದ್ಧ ವಿಮಾನ ವಾಹಕ ನಿರ್ಮಾಣ ಯೋಜನೆ ಕಳೆದ ಏಪ್ರಿಲ್ ನಲ್ಲಿ ಆರಂಭವಾಗಿತ್ತು. ಇದಾದ ಬಳಿಕ ಚೀನಾ ಮತ್ತೆ ಟೈಪ್ 002 ಅತ್ಯಾಧುನಿಕ ಅಣ್ವಸ್ತ್ರ ಸಹಿತ ಯುದ್ಧ ವಿಮಾನ ವಾಹಕ ನೌಕೆಯನ್ನು ಶಾಂಘೈನ ಜಿಯಾಗ್ನನ್ ಶಿಪ್ ಯಾರ್ಡ್ ನಲ್ಲಿ ನಿರ್ಮಾಣ ಮಾಡುತ್ತಿದೆ.
ಆದರೆ ಈ ಬಗ್ಗೆ ಚೀನಾ ಸರ್ಕಾರ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ. ಅಲ್ಲದೆ ಹಾಲಿ ನಿರ್ಮಾಣ ಹಂತದಲ್ಲಿರುವ ಯೋಜನಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲೂ ಚೀನಾ ಮುಂದಾಗಿದೆ ಎನ್ನಲಾಗಿದೆ. 2025ರ ವೇಳೆಗೆ ಚೀನಾದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಹಿತ ಯುದ್ಧ ವಿಮಾನ ವಾಹಕ ನೌಕೆ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com