ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಿಂದ ಕಂಗೊಳಿಸುತ್ತಿದೆ ಗೂಗಲ್ ಡೂಡಲ್

ವಿಶೇಷ ದಿನ, ಮಹನೀಯರ ಜನ್ಮದಿನ ಹಾಗೂ ಸಾಧನೆ ಸೇರಿದಂತೆ ಮೊದಲಾದ ಸಂದರ್ಭಗಳಲ್ಲಿ ಡೂಡಲ್ ಮೂಲಕ ಸೂಚಿಸುವ ಗೂಗಲ್ ಶುಕ್ರವಾರ ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೂ ವಿಶೇಷ ಗೌರವ ಸಲ್ಲಿಸಿದೆ...
ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಿಂದ ಕಂಗೊಳಿಸುತ್ತಿದೆ ಗೂಗಲ್ ಡೂಡಲ್
ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ: ಬಣ್ಣಗಳಿಂದ ಕಂಗೊಳಿಸುತ್ತಿದೆ ಗೂಗಲ್ ಡೂಡಲ್
ನವದೆಹಲಿ: ವಿಶೇಷ ದಿನ, ಮಹನೀಯರ ಜನ್ಮದಿನ ಹಾಗೂ ಸಾಧನೆ ಸೇರಿದಂತೆ ಮೊದಲಾದ ಸಂದರ್ಭಗಳಲ್ಲಿ ಡೂಡಲ್ ಮೂಲಕ ಸೂಚಿಸುವ ಗೂಗಲ್ ಶುಕ್ರವಾರ ಬಣ್ಣಗಳ ಹಬ್ಬ ಹೋಳಿ ಹಬ್ಬಕ್ಕೂ ವಿಶೇಷ ಗೌರವ ಸಲ್ಲಿಸಿದೆ. 
ಹೋಳಿ ಹಬ್ಬದ ಬಣ್ಣಗಳಲ್ಲಿ ಬಣ್ಣಗಳೊಂಡಿದೆ ಗೂಗಲ್ ಕಾಣಿಸಿಕೊಂಡಿದ್ದು, ಡೋಲು ಬಾರಿಸುವ, ಬಣ್ಣ ಎರಚುವ ವಿನ್ಯಾಸದ ಚಿತ್ರಗಳು ಗೂಗಲ್ ಅಂದವನ್ನು ಹೆಚ್ಚುಗೊಳ್ಳುವಂತೆ ಮಾಡಿದೆ. ಈ ಮೂಲಕ ಬಣ್ಣಗಳ ಉತ್ಸವಕ್ಕೆ ಗೂಗಲ್ ಡೂಡಲ್ ಜನರ ಗಮನವನ್ನು ಸೆಳೆಯುತ್ತಿದೆ. 
ಹೋಳಿ ಹಬ್ಬದ ದಿನದಂದು ಎರಚುವ ಹಾಗೂ ಹಚ್ಚುವ ಬಣ್ಣಗಳಿಗೆ ವಿಶೇಷ ಸಂಕೇತವಿದ್ದು, ಕೆಲ ಬಣ್ಣಗಳ ಸಂಕೇತವನ್ನು ಗೂಗಲ್ ವಿವರಿಸಿದೆ. 
ನೀಲಿ ಬಣ್ಣವು, ಪ್ರಶಾಂತತೆಯ ಪ್ರತೀಕವಾಗಿದ್ದು, ಆನಂದ ಮತ್ತು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ. ಹಸಿರು ಬಣ್ಣ, ಇದರ ಪ್ರಭಾವ ನಿಧಾನವಾದರೂ ಈ ಬಣ್ಣದಿಂದ ಶಾಂತಿ, ನೆಮ್ಮದಿ, ವಿಶ್ರಾಂತಿ ಲಭ್ಯ,, ಕೆಂಪು ಬಣ್ಣವು, ಭಾವೋದ್ವೇಗವನ್ನು ಹೆಚ್ಚಿಸುತ್ತದೆ. ಹಳದಿ ಬಣ್ಣವು, ಶಕ್ತಿಶಾಲಿಯ ಸಂಕೇತವಾಗಿದ್ದು, ವ್ಯಾಮೋಹ ವರ್ಧನೆಯಾಗಿದೆ. ಮನಸ್ಥಿತಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com