ಇನ್ನು ಭಾರತ ಪರಮಾಣು ಶಕ್ತಿ ಪೂರೈಕೆ ಗುಂಪು (ಎನ್ ಎಸ್ ಜಿ) ಸದಸ್ಯ ರಾಷ್ಟ್ರವಲ್ಲ ಹಾಗಾಗಿ ಇದು ನೇರವಾಗಿ ಪರಮಾಣು ರಿಯಾಕ್ಟರ್ ಗಳ ನಿರ್ಮಾಣದಲ್ಲಿ ಭಾಗವಹಿಸುವುದಿಲ್ಲ. ಆದರೆ ರೊಸಾಟಮ್ ಹೇಳಿಕೆ ಪ್ರಕಾರ ಭಾರತೀಯ ಕಂಪನಿಗಳು ಬಾಂಗ್ಲಾದೇಶದಲ್ಲಿ ನಿರ್ಮಾಣವಾಗುವ ರೂಪ್ಪೂರ್ ಪರಮಾಣು ವಿದ್ಯುತ್ ಸ್ಥಾವರ ಯೋಜನೆಯಲ್ಲಿ ಭಾಗವಹಿಸಲಿದೆ. ಇದಕ್ಕಾಗಿ ಭಾರತ, ರಷ್ಯಾ ಹಾಗೂ ಬಾಂಗ್ಲಾದೇಶಗಳು ಒಪ್ಪಂದಕ್ಕೆ ಸಹಿ ಹಾಕಿದೆ.