ಅತ್ಯಾಚಾರ
ದೇಶ
ಉತ್ತರ ಪ್ರದೇಶ: ಪತಿ ಇಲ್ಲದಾಗ ನಿರಂತರ ಅತ್ಯಾಚಾರವೆಸಗುತ್ತಿದ್ದ ಮಾವನನ್ನೇ ಕೊಂದ ಸೊಸೆ!
ಮಗ ಕೆಲಸಕ್ಕೆ ಹೋದ ನಂತರ 26 ವರ್ಷದ ಸೊಸೆ ಮೇಲೆ ನಿರಂತರ ಎರಡು ದಿನದಿಂದ ಅತ್ಯಾಚಾರ ಎಸಗುತ್ತಿದ್ದ ಮಾವನನ್ನು ಸೊಸೆ ದೊಣ್ಣೆ ಕೋಲಿನಿಂದ ಹೊಡೆದು...
ಲಖನೌ: ಮಗ ಕೆಲಸಕ್ಕೆ ಹೋದ ನಂತರ 26 ವರ್ಷದ ಸೊಸೆ ಮೇಲೆ ನಿರಂತರ ಎರಡು ದಿನದಿಂದ ಅತ್ಯಾಚಾರ ಎಸಗುತ್ತಿದ್ದ ಮಾವನನ್ನು ಸೊಸೆ ದೊಣ್ಣೆ ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶ ಪಿಲಿಬಿಟ್ ನಲ್ಲಿ ನಡೆದಿದೆ.
ಮಗ ಕೆಲಸಕ್ಕೆ ತೆರಳಿದ ನಂತರ ಶುಕ್ರವಾರ ಮತ್ತು ಶನಿವಾರ ಎರಡು ದಿನ ಪಾಪಿ ಮಾವ ಸೊಸೆ ಮೇಲೆ ಅತ್ಯಾಚಾರ ವೆಸಗಿದ್ದಾನೆ. ಇನ್ನು ಭಾನುವಾರವೂ ತಂದೆ ತನ್ನ ಪತ್ನಿಯ ಮೇಲೆ ದೌರ್ಜನ್ಯ ಎಸಗುವುದನ್ನು ಕಂಡ ಮಗ ಕುಪಿತನಾಗಿದ್ದಾನೆ. ಈ ವೇಳೆ ಆಕ್ರೋಶಗೊಂಡಿದ್ದ ಸೊಸೆ ಮಾವನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿದ್ದಾಳೆ. ಪತ್ನಿಯ ಈ ಕೃತ್ಯಕ್ಕೆ ಪತಿಯೂ ಸಹಾಯ ಮಾಡಿದ್ದು ಕೊಲೆ ಮಾಡಿದ ನಂತರ ದಂಪತಿಗಳು ಮಾಧೋತಂದ ಪೊಲೀಸರಿಗೆ ಶರಣಾಗಿದ್ದಾರೆ.
ಮೃತನ ಪತ್ನಿ ನಾಲ್ಕು ವರ್ಷಗಳ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದರು. ಮಡದಿ ಇಲ್ಲದ ಕಾರಣ ತನ್ನ ಕಾಮತೃಷೆಯನ್ನು ಸೊಸೆಯನ್ನು ಅತ್ಯಾಚಾರಿಸುವ ಮೂಲಕ ತೀರಿಸಿಕೊಂಡಿದ್ದ. ಇನ್ನು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ