ಕಳೆದ ಫೆಬ್ರವರಿ 15ರಂದು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಪರಿಕ್ಕರ್ ಅವರು ಫೆಬ್ರವರಿ 22ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿ, ನೇರವಾಗಿ ಗೋವಾ ವಿಧಾನಸಭೆಗೆ ಬಂದು ಬಜೆಟ್ ಮಂಡನೆಯನ್ನೂ ಮಾಡಿದ್ದರು. ನಂತರ ಮತ್ತೆ ಅನಾರೋಗ್ಯಕ್ಕೀಡಾದ ಮನೋಹರ್ ಪರಿಕ್ಕರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಮಾರ್ಚ್ 1ರಂದು ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಮನೋಹನರ್ ಪರಿಕ್ಕರ್ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ.